Thursday, 12th December 2024

ನಾಳೆಯಿಂದ ಮೊಘಲ್ ಗಾರ್ಡನ್‌ಗೆ ಪ್ರವೇಶ

ನವದೆಹಲಿ: ದೆಹಲಿಯ ಮೊಘಲ್ ಗಾರ್ಡನ್‌ಗೆ ಫೆ.12ರಿಂದ ಮಾರ್ಚ್ 16ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಆನ್‌ಲೈನ್ ಬುಕಿಂಗ್ ಮಾಡುವ ಮೂಲಕ ಜನರು ಮೊಘಲ್ ಗಾರ್ಡನ್ ವೀಕ್ಷಣೆಗೆ ಬರಬಹುದು ಎಂದು ರಾಷ್ಟ್ರಪತಿ ಭವನ ನೀಡಿರುವ ಮಾಹಿತಿ ತಿಳಿಸಿದೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಗುರುವಾರ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ವಾರ್ಷಿಕ ‘ಉದ್ಯಾನೋತ್ಸವ’ವನ್ನು ಉದ್ಘಾಟಿಸಿದರು. ಮೊಘಲ್ ಗಾರ್ಡನ್ಸ್ ಫೆ.12, 2022 ರಿಂದ ಮಾರ್ಚ್ 16, 2022 ರವರೆಗೆ ಪ್ರತಿದಿನ 10 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭೇಟಿಯ ಸಂದರ್ಭದಲ್ಲಿ ಕರೋನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ.

ಒಂದೊಂದು ಸ್ಲಾಟ್‌ನಲ್ಲಿ 100ಜನರಿಗೆ ಮಾತ್ರ ಅವಕಾಶವಿರಲಿದೆ, ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಒಟ್ಟು 7 ಸ್ಲಾಟ್‌ಗಳು ಲಭ್ಯವಿರಲಿದೆ. ಹಿಂದಿನ ವರ್ಷದಂತೆ ಈ ವರ್ಷವೂ ಮುನ್ನೆಚ್ಚರಿಕೆ ಕ್ರಮವಾಗಿ ನೇರವಾಗಿ ವಾಕ್-ಇನ್ ಪ್ರವೇಶ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಈ ವರ್ಷದ ‘ಉದ್ಯಾನೋತ್ಸವ’ದ ಪ್ರಮುಖ ಆಕರ್ಷಣೆ ಯೆಂದರೆ 11 ವಿಧದ ಟುಲಿಪ್‌ಗಳು ಫೆಬ್ರವರಿಯಲ್ಲಿ ಹಂತ ಹಂತವಾಗಿ ಅರಳುವ ನಿರೀಕ್ಷೆಯಿದೆ.

ಮೊಘಲ್ ಗಾರ್ಡನ್ ವೀಕ್ಷಣೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಯ್ದುಕೊಳ್ಳ ಬೇಕು, ಥರ್ಮಲ್ ಸ್ಕ್ರೀನಿಂಗ್ ಮಾಡಿಸಬೇಕು, ಮಾಸ್ಕ್ ಇಲ್ಲದೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಸ್ಪಿರಿಚುವಲ್ ಗಾರ್ಡನ್‌, ಹರ್ಬಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್, ಮ್ಯೂಸಿಕಲ್ ಗಾರ್ಡನ್ ಗಳನ್ನು ಕೂಡ ವೀಕ್ಷಿಸಬಹುದಾಗಿದೆ. ಸಾರ್ವಜನಿಕರು ಪ್ರವೇಶ ಮಾಡಬಹುದು. ಹಾಗೆಯೇ ಅದೇ ಗೇಟ್ ಮೂಲಕವೇ ಹೊರಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಎಂಟ್ರಿ ಹಾಗೂ ಎಕ್ಸಿಟ್ ಎರಡೂ 35ನೇ ನಂಬರ್‌ನ ಪ್ರವೇಶದ್ವಾರಲದಲ್ಲಿರಲಿದೆ, ಬರುವವರು ಮೊಬೈಲ್ ತರಬಹುದಾಗಿದೆ.