Friday, 25th October 2024

ಶ್ರೀಹರಿ ಕೋಟಾದಲ್ಲಿ ಇಒಎಸ್​-01 ಇಂದು ಉಡಾವಣೆ

ಚೆನ್ನೈ: ಇಒಎಸ್​-01 ಸೇರಿ 10 ಉಪಗ್ರಹ ಶ್ರೀಹರಿ ಕೋಟಾದ ಮೊದಲನೇ ಲಾಂಚ್​ ಪ್ಯಾಡ್​ನಿಂದ ಶನಿವಾರ ಉಡಾವಣೆಯಾಗ ಲಿದೆ.

ಇಒಎಸ್​-01 ಉಪಗ್ರಹ ಈ ಮೊದಲು ರಿಯಾಸ್ಯಾಟ್​-2ಬಿಆರ್​2 ಆಗಿತ್ತು. ಅದರಲ್ಲಿ ಸಿಂಥೆಟಿಕ್​ ಅಪರ್ಚರ್​ ರಾಡಾರ್ ಇದ್ದು,  ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಫೋಟೋ ತೆಗೆಯುವ ಸಾಮರ್ಥ್ಯಹೊಂದಿದೆ. ಹಗಲು ಮತ್ತು ರಾತ್ರಿ ನಿಗಾ ಇರಿಸುವ ದೃಷ್ಟಿ ಯಿಂದ ಈ ಉಪಗ್ರಹ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಎಲ್ಲ ರೀತಿಯ ನಾಗರಿಕ ಚಟುವಟಿಕೆಗಳೂ ಇದರಲ್ಲಿ ದಾಖಲಾಗಲಿವೆ. ಭದ್ರತೆ, ಸುರಕ್ಷತೆಯ ದೃಷ್ಟಯಿಂದ ನಿಗಾ ಇರಿಸುವುದಕ್ಕೆ ಇದನ್ನು ಉಪಯೋಗಿಸಲಾಗುತ್ತಿದೆ.

ಇಂದಿನ ಉಡಾವಣೆಯೊಂದಿಗೆ ಇಸ್ರೋ ಒಟ್ಟು 328 ವಿದೇಶಿ ಉಪಗ್ರಹ ಉಡಾವಣೆ ಮಾಡಿದ ದಾಖಲೆ ನಿರ್ಮಿಸಲಿದೆ. ಭಾರತದ ಉಪಗ್ರಹದ ಹೊರತಾಗಿ, ಲಿಥುವಾನಿಯಾ (1-ಟೆಕ್ನಾಲಜಿ ಡೆಮಾನ್​ಸ್ಟ್ರೇಟರ್​), ಲಕ್ಸಂಬರ್ಗ್​ ( ಕ್ಲಿಯೋಸ್ ಸ್ಪೇಸ್​ನಿಂದ 4 ಮಾರ್ಟೈಮ್​ ಅಪ್ಲಿಕೇಶನ್​ ಸ್ಯಾಟಲೈಟ್ಸ್ ), ಅಮೆರಿಕದ 4 ಲೆಮುರ್​ ಮಲ್ಟಿ ಮಿಷನ್ ರಿಮೋಟ್​ ಸೆನ್ಸಿಂಗ್ ಉಪಗ್ರಹಗಳು ಸೇರಿ 9 ಇತರೆ ಉಪಗ್ರಹಗಳು ಪಿಎಸ್​ಎಲ್​ವಿ-ಸಿ49 ಮೂಲಕ ಉಡಾವಣೆಯಾಗಲಿವೆ.