ಶ್ರೀಹರಿಕೋಟಾ: 2022ರಲ್ಲಿ ತನ್ನ ಪ್ರಥಮ ಉಪಗ್ರಹ ಉಡಾವಣಾ ಕಾರ್ಯ ಕೈಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬೆಳಿಗ್ಗೆ ಪಿಎಸ್‍ಎಲ್‍ವಿ-ಸಿ52 ರಾಕೆಟ್ ಮೂಲಕ ಭೂ ವೀಕ್ಷಣಾ ಉಪಗ್ರಹ ಇಒಎಸ್-04 ಮತ್ತು ಇತರ ಎರಡು ಚಿಕ್ಕ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರ್ಪಡಿಸುವಲ್ಲಿ ಯಶಸ್ವಿಯಾಯಿತು.
25 ಗಂಟೆ, 30 ನಿಮಿಷಗಳ ಕ್ಷಣಗಣನೆ ಬಳಿಕ ಇಸ್ರೋ ಪಿಎಸ್‍ಎಲ್‍ವಿ ರಾಕೆಟ್ ಮೂರು ಉಪಗ್ರಹಗಳನ್ನು ಕಪ್ಪು ಆಗಸದೆಡೆಗೆ ಚಿಮ್ಮಿ ಹೊತ್ತೊಯ್ದು ಉದ್ದೇಶಿತ ಕಕ್ಷೆಗೆ ಸೇರ್ಪಡೆಗೊಳಿಸಿತು. ವರ್ಷದ ಪ್ರಥಮ ಉಪಗ್ರಹ ಉಡಾವಣೆ ಉಸ್ತುವಾರಿ ಹೊತ್ತಿದ್ದ ವಿಜ್ಞಾನಿಗಳು ಹರ್ಷೋದ್ಗಾರ ಮಾಡಿದರು.
17 ನಿಮಿಷ 34 ಸೆಕೆಂಡ್‍ಗಳ ಪಯಣದ ಬಳಿಕ ಉಪಗ್ರಹಗಳನ್ನು 529ಕಿ.ಮೀ.ಗಳಷ್ಟು ದೂರದ ಸನ್ ಸಿಂಕ್ರೋನಸ್ ಸೌರಕಕ್ಷೆಗೆ ಸಫಲವಾಗಿ ಸೇರ್ಪಡೆಗೊಳಿಸಲಾಯಿತು.
ಬೇರ್ಪಡೆಗೊಂಡ ಬಳಿಕ ಇಒಎಸ್-4ರ ಎರಡು ಸೌರ ಸಾಧನಗಳು ಸ್ವಯಂಚಾಲಿತವಾಗಿ ನಿಯೋಜನೆಗೊಂಡವು. ಬೆಂಗಳೂರಿನ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ಕಾರ್ಯಜಾಲವು ಉಪಗ್ರಹದ ನಿಯಂತ್ರಣ ಸಾಸಿತು. ಮುಂದಿನ ದಿನಗಳಲ್ಲಿ ಉಪಗ್ರಹವನ್ನು ಅದರ ಅಂತಿಮ ಕಾಯಾರಣೆಯ ಸಂರಚನೆಗೆ ತರಲಾಗುವುದು.