Friday, 13th December 2024

ಸ್ಕಿಡ್ ಆದ ಬೆಂಗಾವಲು ವಾಹನ: ಪೊಲೀಸ್ ಅಧಿಕಾರಿಗಳ ಸಾವು

ಶ್ರೀನಗರ: ನದಿಗೆ ಪೊಲೀಸ್ ಅಧೀಕ್ಷಕರ ಬೆಂಗಾವಲು ವಾಹನ ಸ್ಕಿಡ್ ಆಗಿ ಬಿದ್ದು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ.

ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಬಫ್ಲಿಯಾಜ್ ಪ್ರದೇಶದಲ್ಲಿರುವ ಡ್ರೋಗ್ಜಿಯನ್ ಎಂಬ ಗ್ರಾಮದಲ್ಲಿ ಬೆಂಗಾ ವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ಗಾಯ ಗೊಂಡಿದ್ದ 6 ಪೊಲೀಸ್ ಸಿಬ್ಬಂದಿಗಳನ್ನು ತಕ್ಷಣ ಸುರನ್ ಕೋಟೆಯ ಉಪ-ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. 

ವಿಭಾಗೀಯ ಪೊಲೀಸ್ ಆಯುಕ್ತ ರಾಘವ ಲಾಗರ್ ಜಮ್ಮುವಿಗೆ ಭೇಟಿ ನೀಡಲಿದ್ದು, ಭದ್ರತೆ ನೀಡಲು ಪೂಂಚ್ ಎಸ್ ಎಸ್ ಪಿ ವಿನೋದ್ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿತ್ತು.