ಜೈಪುರ್: ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ, ರಾಜಸ್ಥಾನದ ಮತ್ತು ಗುಜರಾತಿನ ಮಾಜಿ ರಾಜ್ಯಪಾಲರಾಗಿದ್ದ ಅನ್ಶುಮಾನ್ ಸಿಂಗ್ (85) ಅಲಹಾಬಾದ್ ನಲ್ಲಿ ನಿಧನವಾದರು.
ಅಲ್ಪಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್ ಲಖನೌನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1999-2003ರ ನಡುವೆ ರಾಜಸ್ಥಾನ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಬರಗಾಲ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಸಾಮಗ್ರಿಗಳನ್ನು ವಿತರಿಸಿದ್ದರು. ಮುರಾರಿ ಬಾಪು ಅವರ ಪ್ರವಚನಗಳನ್ನು ರಾಜಭವನದಲ್ಲಿ ಆಯೋಜಿಸುವುದರ ಮೂಲಕ ಸುದ್ದಿಯಾಗಿದ್ದರು. ಸಮಾವೇಶದ ಮೂಲಕ ಸಂಗ್ರಹವಾದ ಹಣವನ್ನು ಬರಗಾಲ ಪೀಡಿತ ಜನರಿಗೆ ತಲುಪಿಸಿದ್ದರು.
ಸಿಂಗ್ ಅವರ ನಿಧನದ ಬಗ್ಗೆ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಸಂತಾಪ ಸೂಚಿಸಿದ್ದಾರೆ.