Thursday, 19th September 2024

ಕೊರೋನಾ ಸೋಂಕಿಗೆ ಮಾಜಿ ಸಂಸದ ಸತ್ಯದೇವ್ ಸಿಂಗ್ ನಿಧನ

ನವದೆಹಲಿ: ಬಿಜೆಪಿ ಪಕ್ಷದ ಹಿರಿಯ ಮುಖಂಡ, ಮಾಜಿ ಸಂಸದ ಸತ್ಯದೇವ್ ಸಿಂಗ್ ಕೋವಿಡ್ 19 ಸೋಂಕಿನಿಂದ ನಿಧನರಾಗಿ ರುವುದಾಗಿ ವರದಿ ತಿಳಿಸಿದೆ.

ಪಕ್ಷದ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷರಾಗಿದ್ದ ಸತ್ಯದೇವ್ ಸಿಂಗ್ ರನ್ನು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಗುರ್ಗಾಂವ್ ನ ಮೇದಾಂತ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಮೂಲಗಳು ಹೇಳಿವೆ.

ಕೆಲವು ದಿನಗಳ ಹಿಂದಷ್ಟೇ ಸತ್ಯದೇವ್ ಸಿಂಗ್ ಅವರ ಆರೋಗ್ಯ ಪರೀಕ್ಷೆ ನಡೆಸಿದಾಗ ಕೋವಿಡ್ 19 ಸೋಂಕು ಪತ್ತೆಯಾಗಿತ್ತು. 1977ರಲ್ಲಿ ಸತ್ಯದೇವ್ ಅವರು ಭಾರತೀಯ ಲೋಕ್ ದಳ ಟಿಕೆಟ್ ನಿಂದ ಗೋಂಡಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

1991 ಮತ್ತು 1996ರಲ್ಲಿ ಬಲರಾಮ್ ಪುರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. 1980ರಿಂದ 1985ರವರೆಗೆ ಸತ್ಯದೇವ್ ಅವರು ಭಾರತೀಯ ಜನತಾ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

Leave a Reply

Your email address will not be published. Required fields are marked *