Sunday, 15th December 2024

ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್ ಡಿಸ್ಚಾರ್ಜ್‌

ನವದೆಹಲಿ: ಕರೋನಾ ಪಾಸಿಟಿವ್‌ ಬಂದಿದ್ದ ಹಿನ್ನೆಲೆಯಲ್ಲಿ ಏ.19ರಂದು ದೆಹಲಿಯ ಏಮ್ಸ್​ ಆಸ್ಪತ್ರೆಯ ಟ್ರಾಮಾ ಸೆಂಟರ್​ಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್​ ಸಿಂಗ್ ಅವರು ಗುಣಮುಖ ರಾಗಿದ್ದು, ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ.

ಮನಮೋಹನ್​ ಸಿಂಗ್ ಅವರು ಕಳೆದ ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಭಾಗವಹಿಸಿ ದ್ದರು. ನಂತರ ಕರೋನಾ ವೈರಸ್ ಹಾಗೂ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕರೋನಾ ಲಸಿಕೆ, ಲಸಿಕೆ ವಿತರಣೆ ಕುರಿತು ಪಾರದರ್ಶಕತೆ ಬೇಕು ಎಂದು ಪತ್ರದಲ್ಲಿ ಹೇಳಿದ್ದರು.

ಇದಾದ ಬೆನ್ನಲ್ಲೇ ಅವರಿಗೆ ಕರೊನಾ ಪಾಸಿಟಿವ್‌ ಕಾಣಿಸಿಕೊಂಡಿತ್ತು. ಇದೀಗ ಗುಣಮುಖರಾಗಿ ಡಿಸ್‌ಚಾರ್ಜ್‌ ಆಗಿದ್ದಾರೆ.