Thursday, 12th December 2024

ನಕಲಿ ದಾಖಲೆ: 2,494 ಶಿಕ್ಷಕರಿಗೆ ಗೇಟ್‌ ಪಾಸ್

ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ 2,494 ಶಿಕ್ಷಕರು ನಕಲಿ ದಾಖಲೆಗಳನ್ನು ನೀಡಿ ನೇಮಕವಾಗಿರುವ ಸಂಗತಿ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಮತ್ತು ವಿಶೇಷ ಕಾರ್ಯ ಪಡೆ ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ.

ಎಸ್​ಟಿಎಫ್​ ನ ಹಿರಿಯ ಅಧಿಕಾರಿಯೊಬ್ಬರು, ಇಡೀ ರಾಜ್ಯಾದ್ಯಂತ ಸರಿಯಾದ ರೀತಿಯಲ್ಲಿ ತನಿಖೆ ಮಾಡಿದರೆ 10 ಸಾವಿರಕ್ಕೂ ಹೆಚ್ಚು ನಕಲಿ ಶಿಕ್ಷಕರು ಸಿಗು ತ್ತಾರೆ ಎಂದರು.

ಶಿಕ್ಷಣ ಇಲಾಖೆಯ ನೇಮಕಾತಿ ಹಗರಣ ಭಾರೀ ಸುದ್ದಿಯಾದ ಬೆನ್ನಲ್ಲೇ 2020 ರಲ್ಲಿ ಉತ್ತರ ಪ್ರದೇಶ ಸರ್ಕಾರ ಎಸ್​ಟಿಎಫ್​ ತಂಡ ವನ್ನು ರಚಿಸಿ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡತ್ತು. ಅಂದಿನಿಂದ ತನಿಖೆ ಕೈಗೆತ್ತಿಕೊಂಡ ಎಸ್​ಟಿಎಫ್​, ಶಿಕ್ಷಣ ಇಲಾಖೆ ಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಶಿಕ್ಷಕರನ್ನು ಗುರುತಿಸಿದೆ ಮತ್ತು ಎಫ್‌ಐಆರ್ ನೋಂದಣಿ, ಸೇವೆಯಿಂದ ವಜಾಗೊಳಿಸುವುದು, ವೇತನದ ಹಣ ವಸೂಲಿ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತನಿಖಾ ವೇಳೆ 2,461 ನಕಲಿ ಶಿಕ್ಷಕರನ್ನು ವಜಾಗೊಳಿಸಲಾಗಿದೆ.

ಜಿಲ್ಲೆಯಲ್ಲಿನ ನಮ್ಮ ಸಮಿತಿಯು ಇಂತಹ ಸಾಕಷ್ಟು ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ ಮತ್ತು ಸಾಕಷ್ಟು ಪರಿಶ್ರಮದ ನಂತರ ನಾವು ಹಲವು ಶಿಕ್ಷಕರನ್ನು ನಕಲಿ ಎಂದು ಕಂಡುಕೊಂಡಿದ್ದೇವೆ ಎಂದರು. ನಕಲಿ ಶಿಕ್ಷಕರ ವಿರುದ್ಧ ಎಫ್‌ಐಆರ್, ವಸೂಲಾತಿ ನೋಟೀಸ್ ಮತ್ತು ಅಮಾನತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ಅನಾಮಿಕಾ ಶುಕ್ಲಾ ಅವರ ನಿಗೂಢ ಪ್ರಕರಣವು ನೇಮಕಾತಿ ಹಗರಣದ ತನಿಖೆಗೆ ಪ್ರಮುಖ ತಿರುವು ನೀಡಿತು. 2020ರ ಜೂನ್ ತಿಂಗಳಲ್ಲಿ ‘ಅನಾಮಿಕಾ ಶುಕ್ಲಾ’ ಎಂಬುವರ ಶಿಫಾರಸು ಪತ್ರವನ್ನು ಬಳಸಿಕೊಂಡು ಹಲವಾರು ಮಹಿಳೆಯರು ಸರ್ಕಾರಿ ಶಾಲೆ ಗಳಿಗೆ ನೇಮಕವಾಗಿರುವುದು ಪತ್ತೆಯಾದ ನಂತರ ಯುಪಿ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು.