Tuesday, 10th September 2024

ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ಕೋಟ್ಯಂತರ ರೂ. ಸುಲಿಗೆ..!

ಗುಜರಾತ್‌: ನಕಲಿ ಟೋಲ್ ಪ್ಲಾಜಾ ನಿರ್ಮಿಸಿ ಒಂದೂವರೆ ವರ್ಷದಿಂದ ಕೋಟ್ಯಂತರ ರೂ. ಸುಲಿಗೆ ಮಾಡಲಾಗಿದೆ.

ಗುಜರಾತಿನ ಬಮನ್‌ಬೋರ್‌ ಕಚ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಕಲಿ ಟೋಲ್‌ ಸ್ಥಾಪಿಸಿ ವಾಹನ ಸವಾರರಿಂದ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಕೆಲವು ಪ್ರಬಲ ವ್ಯಕ್ತಿಗಳು ಸರ್ಕಾರಿ ಅಧಿಕಾರಿಗಳನ್ನು ವಂಚಿಸಿ ಜನರ ಸುಲಿಗೆ ಮಾಡಿದ್ದಾರೆ.

ಗುಜರಾತ್‌ನ ಮೊರ್ಬಿಯಲ್ಲಿ ಬೈಪಾಸ್‌ನಲ್ಲಿ ಸಾಗುವ ನ್ಯಾಷನಲ್ ಹೈವೇಯ ಸಮೀಪ ಖಾಸಗಿ ಭೂಮಿಯಲ್ಲಿ ನಕಲಿ ಟೋಲ್ ಪ್ಲಾಜಾವನ್ನು ಸ್ಥಾಪಿಸ ಲಾಗಿತ್ತು. ಈ ಟೋಲ್‌ಬೂತ್‌ಗಳಲ್ಲಿ ಅರ್ಧದಷ್ಟು ಖದೀಮರು ವಾಹನ ಸವಾರರು, ಸ್ಥಳೀಯ ಜನರು, ಪೊಲೀಸರು ಹಾಗೂ ಜಿಲ್ಲೆಯ ಉನ್ನತ ಸರ್ಕಾರಿ ಅಧಿಕಾರಿಗಳನ್ನು ಒಂದೂವರೆ ವರ್ಷಗಳ ಕಾಲ ವಂಚಿಸಿದ್ದಾರೆ.

ಆರೋಪಿಗಳು ನಿಜವಾದ ಮಾರ್ಗದಿಂದ ವಾಹನದ ಸಂಚಾರವನ್ನು ಬೈಪಾಸ್‌ಗೆ ತಿರುಗಿಸುತ್ತಿದ್ದರು. ಈ ಖಾಸಗಿ ಜಾಮೀನು ವೈಟ್ ಹೌಸ್ ಸೆರಾಮಿಕ್ ಸಂಸ್ಥೆಗೆ ಸೇರಿದೆ.

ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ವಿವರವಾದ ದೂರು ದಾಖಲಿಸಿಕೊಂಡು, ಘಟನೆಗೆ ಸಂಬಂಧಿಸಿದಂತೆ ವೈಟ್ಹೌಸ್ ಸಿರಾಮಿಕ್ ಸಂಸ್ಥೆಯ ಮಾಲೀಕ ಅಮರ್ಶಿ ಪಟೇಲ್, ವನರಾಜ್ ಸಿಂಗ್ ಝಲ, ಹರ್‌ವಿಜಯ್ ಸಿಂಗ್ ಝಲ,ಧರ್ಮೇಂದ್ರ ಸಿಂಗ್ ಝಲ, ಯುವರಾಜ್‌ ಸಿಂಗ್ ಝಲ ಹಾಗೂ ಕೆಲ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *