Saturday, 23rd November 2024

ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ: ಪೊಲೀಸರ ಮೇಲೆಯೇ ಹಲ್ಲೆ

ದೆಹಲಿ: ಇಡೀ ದೇಶ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಮಿಂದೇಳುತ್ತಿದ್ದರೆ, ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ ಕಟ್ಟೆಹೊಡೆದಿದ್ದು, ದೆಹಲಿಯ ಗಾಜಿಪುರ ರಣರಂಗವಾಯಿತು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಲಕ್ಷಾಂತರ ಟ್ರ್ಯಾಕ್ಟರ್​ಗಳೊಂದಿಗೆ ಗಣರಾಜ್ಯೋ ತ್ಸವ ಸಮಾರಂಭ ನಡೆಯುತ್ತಿರುವ ರಾಜಪತ್​ದತ್ತ ಲಗ್ಗೆ ಇಡಲು ಮುಂದಾಗುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ. ನಾಲ್ಕರಿಂದ 5 ಲಕ್ಷ ಟ್ರ್ಯಾಕ್ಟರ್​ಗಳಲ್ಲಿ ಬಂದ ರೈತರನ್ನು ಸಿಂಘು ಗಡಿ ಮತ್ತು ಗಾಜಿಪುರ ಗಡಿಯಲ್ಲೇ ಬ್ಯಾರಿಕೇಡ್​ ಹಾಕಿ ತಡೆಯಲು ಯತ್ನಿಸು ತ್ತಿದ್ದರೂ ಸಿಟ್ಟಿಗೆದ್ದ ರೈತರು ಬ್ಯಾರಿಕೇಡ್​ ಮುರಿದು ಒಳನುಗ್ಗಲು ಯತ್ನಿಸಿದ್ದು, ಲಾಠಿಚಾರ್ಜ್ ಮಾಡಲಾಗಿದೆ.

ರೈತರ ದೆಹಲಿ ಪ್ರವೇಶವನ್ನ ತಡೆಯಲು ಬಂದ ಪೊಲೀಸರನ್ನೇ ರೈತರು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಪರಿಣಾಮ ಹಲವು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.

ರೈತರ ಪ್ರತಿಭಟನೆಯ ಸ್ವರೂಪ ಉಗ್ರವಾಗಿದ್ದು, ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲೋದಿಲ್ಲ ಎಂದು ಎಚ್ಚರಿಸಿ ದ್ದಾರೆ. ಪ್ರತಿಭಟನಾಕಾರರು ಕೈಯಲ್ಲಿ ತಲ್ವಾರ್​ ಹಿಡಿದುಕೊಂಡು ಓಡಾಡುತ್ತಿದ್ದು, ದೆಹಲಿಯ ಗಾಜಿಪುರ ರಣರಂಗವಾಗಿದೆ. ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ.