Wednesday, 11th December 2024

ಸಿಬಿಐ ಕಟ್ಟಡದ ನೆಲಮಾಳಿಗೆಯಲ್ಲಿ ಅಗ್ನಿ ಅವಘಡ

ನವದೆಹಲಿ: ದೆಹಲಿಯ ಲೋಧಿ ರಸ್ತೆ ಪ್ರದೇಶದ ಸಿಜಿಒ ಸಂಕೀರ್ಣದಲ್ಲಿರುವ ಸಿಬಿಐ ಕಟ್ಟಡದ ನೆಲಮಾಳಿಗೆಯಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.

ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಇಲಾಖೆಗೆ ಕರೆ ಬಂದಿದೆ. ಒಟ್ಟು 8 ಅಗ್ನಿಶಾಮಕ ವಾಹನಗಳನ್ನು ತಕ್ಷಣವೇ ಸ್ಥಳಕ್ಕೆ ಕಳಿಸಲಾಯಿತು ಎಂದು ಅವರು ಹೇಳಿದರು. ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನ ವೇಳೆಗೆ ಬೆಂಕಿ ನಂದಿಸಿದರು.

ಕಟ್ಟಡದಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ತ್ವರಿತವಾಗಿ ಸ್ಥಳಾಂತರಿಸಲಾಯಿತು. ‘ಬೆಂಕಿಯ ನಿಖರ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು. ಏತನ್ಮಧ್ಯೆ, ಅಗ್ನಿ ಶಾಮಕದಳದ ಎಂಟು ವಾಹನಗಳ ಸೈರನ್ ಕೇಳಿ ಸಿಬಿಐ ಕಟ್ಟಡ ಮತ್ತು ಸುತ್ತಮುತ್ತಲಿನ ಜನರು ಗಾಬರಿಯಾದರು. ಪಶ್ಚಿಮ ದೆಹಲಿಯ ಮಾಯಾಪುರಿಯ ಕಾರ್ಖಾನೆಯ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ.

ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಮತ್ತು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.