Thursday, 19th September 2024

ಮೊದಲ ಕರೋನಾ ರೋಗಿಗೆ, ಎರಡನೇ ಬಾರಿ ಸೋಂಕು ದೃಢ

ತಿರುವನಂತಪುರಂ: ಮೊದಲ ಬಾರಿಗೆ ಕರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದ ಕೇರಳದ ವೈದ್ಯಕೀಯ ವಿದ್ಯಾರ್ಥಿನಿಗೆ ಬರೋಬ್ಬರಿ ಒಂದು ವರ್ಷ 6 ತಿಂಗಳ ನಂತರ ಎರಡನೇ ಬಾರಿ ಸೋಂಕು ತಗುಲಿರುವುದು ತಪಾಸಣೆಯಲ್ಲಿ ದೃಢಪಟ್ಟಿದೆ.

ಚೀನಾದ ವುಹಾನ್ ನಗರದಿಂದ ಮರಳಿದ್ದ ಕೇರಳದ ತ್ರಿಸ್ಸುರ್ ಜಿಲ್ಲೆಯ ವಿದ್ಯಾರ್ಥಿನಿಗೆ 2020ರ ಜನವರಿ 30ರಂದು ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. ದೇಶದಲ್ಲಿ ಇದು ಮೊದಲ ಪ್ರಕರಣವಾಗಿತ್ತು. ಈ ವಿದ್ಯಾರ್ಥಿನಿ ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡು ತ್ತಿದ್ದರು.

ನಾನು ದೆಹಲಿಗೆ ಹೋಗುವುದಕ್ಕೂ ಮೊದಲು ನಡೆಸಿದ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಆದರೆ RT-PCR ತಪಾಸಣೆಯಲ್ಲಿ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯಕ್ಕೆ ನಾನು ಗೃಹ ದಿಗ್ಬಂಧನದಲ್ಲಿದ್ದೇನೆ,” ಎಂದು ಮತಿಲಕಮ್ ವಿದ್ಯಾರ್ಥಿನಿ ಹೇಳಿದ್ದಾರೆ.

 

Leave a Reply

Your email address will not be published. Required fields are marked *