Tuesday, 26th November 2024

ತೆಲಂಗಾಣದ ಮೊದಲ ಮಾಜಿ ಗೃಹ ಸಚಿವ ಇನ್ನಿಲ್ಲ

ಹೈದರಾಬಾದ್ : ತೆಲಂಗಾಣದ ಮಾಜಿ ಗೃಹ ಸಚಿವ ನಾಯನಿ ನರಸಿಂಹ ರೆಡ್ಡಿ (76) ಗುರುವಾರ ನಿಧನರಾದರು.

ತೆಲಂಗಾಣದ ಮೊದಲ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ನರಸಿಂಹ ಕೊರೊನಾ ನಂತರ ಶ್ವಾಸಕೋಶದ ಸಮಸ್ಯೆಗೆ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹೈದರಾಬಾದ್ ಟ್ರೇಡ್ ಯೂನಿಯನ್ ಹಿರಿಯ ಮುಖಂಡರಾಗಿದ್ದ ಇವರು ತೆಲಂಗಾಣ ಪ್ರತ್ಯೇಕ ರಾಜ್ಯದ ಪ್ರಮುಖರಾಗಿದ್ದರು. ಆಂಧ್ರ ವಿಭಜನೆಗೂ ಮೊದಲು 1978, 1985 ಮತ್ತು 2014 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.