Thursday, 12th December 2024

ಲವ್ ಜಿಹಾದ್ ಪ್ರಕರಣ: ಮೊದಲ ಶಿಕ್ಷೆ ಪ್ರಕಟ

LOve Jihad

ನವದೆಹಲಿ: ಲವ್ ಜಿಹಾದ್ (2020ರಲ್ಲಿ ಜಾರಿ) ಕಾನೂನಿನಡಿಯಲ್ಲಿ‌ ಮೊದಲ ಶಿಕ್ಷೆ ಪ್ರಕಟವಾಗಿದ್ದು, ಯುವಕನೋರ್ವನಿಗೆ ಹತ್ತು ವರ್ಷ ಜೈಲು ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

2017ರಲ್ಲಿ ಜಾವೇದ್ ಎಂಬ ಮುಸ್ಲಿಂ ಯುವಕ ಮುನ್ನಾ ಎಂದು ಹೆಸರು ಬದಲಿಸಿಕೊಂಡು, ಹಿಂದು ಯುವತಿಯೋರ್ವಳನ್ನ ಬಲೆಗೆ ಬೀಳಿಸಿಕೊಂಡಿದ್ದ. ಪ್ರೀತಿಸಿದ ನಂತರ ಮದುವೆಯಾದ ಈ ಯುವತಿಗೆ ಈತನ ನಿಜ ಸ್ವರೂಪ ತಿಳಿದದ್ದು.

ಗಂಡನ ಮನೆಗೆ ಹೋಗುತ್ತಿದ್ದಂತೆ ಆತ ತನ್ನ ನಿಜ ಸ್ವರೂಪ ತೋರಿಸಿದ್ದು, ಮುಸ್ಲಿಂ ಪದ್ಧತಿಯಂತೆ ನಿಖಾ ಮಾಡಿಕೊಳ್ಳಲು ಪೀಡಿಸಿದ್ದಾನೆ ಎಂದು ಹುಡುಗಿ ತಿಳಿಸಿದ್ದಾಳೆ. ಮೈನರ್ ಆಗಿರುವ ಈ ಹುಡುಗಿ ಆತ ತನ್ನನ್ನು ಅತ್ಯಾಚಾರ ಮಾಡಿದ್ದಾನೆ ಎಂದಿರುವುದರಿಂದ ಪೋಕ್ಸೊ ಕಾಯ್ದೆಯಡಿಯಲ್ಲೂ ಕೇಸ್ ದಾಖಲಿಸಿಕೊಳ್ಳಲಾಗಿದೆ‌.

ಕಳೆದ ವರ್ಷ ಜಾರಿಯಾಗಿದ್ದ ಈ ಕಾನೂನಿನ ಪ್ರಕಾರ ಮದುವೆಯಾದ ಮೇಲೆ ಬಲವಂತವಾಗಿ ಕನ್ವರ್ಟ್ ಮಾಡಲು ಪ್ರಯತ್ನಿಸಿದ್ದರೆ ಮದುವೆಯನ್ನೆ ರದ್ದುಗೊಳಿಸಲಾಗುವುದು.