Tuesday, 7th January 2025

ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳ ಜಾಹೀರಾತುಗಳಿಗೆ ಹೊಸ ದರ

ನವದೆಹಲಿ: ರ್ಕಾರಿ ಯೋಜನೆ ಮತ್ತು ಕಾರ್ಯಕ್ರಮಗಳಿಗಾಗಿ ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳಲ್ಲಿ ನೀಡಲಾಗುವ ಜಾಹೀರಾತುಗಳಿಗೆ ಹೊಸ ದರಗಳನ್ನು ಅನುಮೋದಿಸಲಾಗಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸಿದ ದರ ರಚನಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ಹೊಸ ದರ ಅನುಮೋದಿಸಲಾಗಿದೆ.

ಕೇಂದ್ರ ಸರ್ಕಾರವು ಯಾವುದೇ ಕಾರ್ಯಕ್ರಮದ ಜಾಹೀರಾತುಗಳನ್ನು ಪತ್ರಿಕೆಗಳು, ಟಿವಿಗಳು ಸೇರಿದಂತೆ ರೆಡಿಯೋಗಳಿಗೂ ನೀಡುತ್ತದೆ.

ದೇಶದಲ್ಲಿ ಹಲವಾರು ಭಾರತೀಯ ಭಾಷೆಗಳಲ್ಲಿ ಮತ್ತು ದೇಶದ ಹೆಚ್ಚಿನ ರಾಜ್ಯಗಳಲ್ಲಿ 380 ಕ್ಕೂ ಹೆಚ್ಚು ಖಾಸಗಿ ಎಫ್‌ಎಂ ಚಾನೆಲ್‌ಗಳಿದ್ದು, ಸ್ಥಳೀಯ ವಾಗಿ ಜನಪ್ರಿಯತೆ ಹೆಚ್ಚುತ್ತಿದೆ.

ಡಿಸೆಂಬರ್ 2015 ರಿಂದ ಮಾರ್ಚ್ 2023 ರ ಅವಧಿಯಲ್ಲಿ ಏರುತ್ತಿರುವ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಂಡು ಈಗ ಮೂಲ ದರದಲ್ಲಿ ಶೇಕಡ 43 ರಷ್ಟು ಹೆಚ್ಚಳವನ್ನು ಮಾಡಲಾಗಿದೆ. ಸೆಪ್ಟೆಂಬರ್ 2023 ರಲ್ಲಿ ಸಚಿವಾಲ ಯವು ಅನುಮೋದಿಸಿದ ಹೊಸ ದರವು ಎಫ್‌ಎಂಗೆ ಸರ್ಕಾರಿ ಜಾಹೀರಾತಿನಿಂದ ಕೊಂಚ ಅಧಿಕ ಆದಾಯ ನೀಡಲಿದೆ. ರೇಡಿಯೋ ಜಾಹೀರಾತುಗಳು ಪ್ರತಿ ಹತ್ತು ಸೆಕೆಂಡುಗಳಿಗೆ 52 ರೂಪಾಯಿಯಿಂದ 74 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಸಚಿವಾಲಯವು ಸುಮಾರು 7 ವರ್ಷಗಳ ನಂತರ ಖಾಸಗಿ ಎಫ್‌ಎಂ ರೆಡಿಯೋಗಳ ಜಾಹೀರಾತು ದರಗಳನ್ನು ಪರಿಷ್ಕರಣೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.  ನಗರವಾರು ದರಗಳನ್ನು ಲೆಕ್ಕಾಚಾರ ಮಾಡಲು ಅಸ್ತಿತ್ವದಲ್ಲಿರುವ ಬೆಲೆ ಸೂತ್ರವನ್ನು ಮುಂದುವರಿಸಲು ಸಚಿವಾಲಯ ನಿರ್ಧರಿಸಿದೆ.

ಖಾಸಗಿ ಎಫ್‌ಎಂ ರೇಡಿಯೊ ಕೇಂದ್ರಗಳ ದರ ರಚನೆ ಸಮಿತಿಯನ್ನು ಕಳೆದ ವರ್ಷ 2015 ರಲ್ಲಿ ಪರಿಷ್ಕರಿಸಲಾದ ಹೊಸ ದರಗಳನ್ನು ಮೌಲ್ಯಮಾಪನ ಮಾಡಲು ಮತ್ತು ಶಿಫಾರಸು ಮಾಡಲು ಸಚಿವಾಲಯವು ಸ್ಥಾಪಿಸಿದೆ.

Leave a Reply

Your email address will not be published. Required fields are marked *