ನವದೆಹಲಿ: ಟ್ವಿಟರ್ ಗೆ ಕೊನೆಯ ಎಚ್ಚರಿಕೆಯ ನೋಟೀಸ್ ಜಾರಿ ಮಾಡಿರುವ ಕೇಂದ್ರ ಸರ್ಕಾರ ತಕ್ಷಣ ಹೊಸ ಐಟಿ ಮಾರ್ಗಸೂಚಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ.
ಸೋಷಿಯಲ್ ಮೀಡಿಯಾಗಳು ಹೊಸ ಐಟಿ ನೀತಿಗಳನ್ನು ಅಳವಡಿಸಿಕೊಳ್ಳಲು ಈಗಾಗಲೇ ನೀಡಲಾಗಿದ್ದ ಗಡುವು ಮೇ 26ಕ್ಕೆ ಅಂತ್ಯವಾಗಿದೆ. ಆದರೂ ಟ್ವಿಟರ್ ಹೊಸ ನೀತಿಯನ್ನು ಅನುಸರಿಸಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಕೊನೆಯ ನೋಟೀಸ್ ನೀಡಿ ರುವ ಕೇಂದ್ರ ಸರ್ಕಾರ ಶೀಘ್ರವೇ ಕೇಂದ್ರ ಸರ್ಕಾರದ ಹೊಸ ಐಟಿ ಮಾರ್ಗಸೂಚಿ ಅಳವಡಿಸಿಕೊಳ್ಳಬೇಕು. ಟ್ವಿಟರ್ ಗೆ ದೂರು ಪರಿಹಾರಕ್ಕೆ ಸೂಕ್ತ ವ್ಯವಸ್ಥೆಯಿರಬೇಕು. ಜನರಿಗೆ ಸುರಕ್ಷತೆ ವಾತಾವರಣ ಕಲ್ಪಿಸಬೇಕು ಎಂದು ಸೂಚಿಸಿದೆ.
ಒಂದು ವೇಳೆ, ಹೊಸ ಐಟಿ ಮಾರ್ಗಸೂಚಿ ಪಾಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಐಟಿ ಕಾಯ್ದೆ 79 ಅಡಿ ನೀಡಲಾ ಗುವ ವಿನಾಯಿತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ.