ಬೆಂಗಳೂರು: ನಿದ್ರೆ ದೇಹದ ಆರೋಗ್ಯಕ್ಕೆ ತುಂಬಾ ಉತ್ತಮ. ಸಾಕಷ್ಟು ನಿದ್ರೆ ಮಾಡುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಹಾಗಾಗಿ ವೈದ್ಯರು ದಿನಕ್ಕೆ 7-8 ಗಂಟೆಗಳ ಕಾಲ ನಿದ್ರಿಸುವಂತೆ ಸೂಚಿಸುತ್ತಾರೆ. ಸಾಮಾನ್ಯವಾಗಿ ಕೆಲಸದ ಒತ್ತಡ, ಚಿಂತೆಯಿಂದಾಗಿ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಆದರೆ ಕೆಲವರಿಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೂಡ ನಿದ್ರೆ ಬರುವುದಿಲ್ಲ. ಅಂತವರು ರಾತ್ರಿ ಮಲಗುವ ಮುನ್ನ ಊಟದ (Food Should Avoid at Night) ವೇಳೆ ಕೆಲವೊಂದು ಆಹಾರ ಸೇವಿಸುವುದನ್ನು ತಪ್ಪಿಸಬೇಕು. ಹಾಗಾದರೆ ಆ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳೋಣ.
ಉತ್ತಮ ನಿದ್ರೆಗಾಗಿ ರಾತ್ರಿ ಊಟದಲ್ಲಿ ಸೇವಿಸಲೇ ಬಾರದ ಆಹಾರಗಳು
ಕೆಫೀನ್
ಕೆಫೀನ್ ನಿದ್ರೆ ಬರದಂತೆ ತಡೆಯುತ್ತದೆ. ಹಾಗಾಗಿ ರಾತ್ರಿಯ ವೇಳೆ ಕೆಫೀನ್ ಇರುವಂತಹ ಆಹಾರವನ್ನು ಸೇವಿಸಬಾರದು. ಹಾಗೇ ಸಂಜೆ ಕೆಫೀನ್ ಸೇವಿಸುವುದು ನಿದ್ರೆಯ ಮಾದರಿಗಳನ್ನು ಅಡ್ಡಿಪಡಿಸಬಹುದು ಮತ್ತು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡಬಹುದು. ರಾತ್ರಿ ಉತ್ತಮ ನಿದ್ರೆಗಾಗಿ ರಾತ್ರಿ ಊಟದಲ್ಲಿ ಕೆಫೀನ್ ಭರಿತ ಆಹಾರಗಳು ಮತ್ತು ಪಾನೀಯಗಳನ್ನು ತಪ್ಪಿಸಿ.
ಪಿಷ್ಟ ಭರಿತ ಆಹಾರಗಳು
ಪಿಷ್ಟ ಭರಿತ ಆಹಾರಗಳು ನಿದ್ರೆಗೆ ಅಡ್ಡಿಪಡಿಸುತ್ತವೆ. ಪಾಸ್ತಾ, ಅನ್ನ ಮತ್ತು ಬ್ರೆಡ್‍ನಂತಹ ಹೆಚ್ಚಿನ ಕಾರ್ಬ್ ಆಹಾರಗಳನ್ನು ಸಂಜೆ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು, ಉಬ್ಬರ ಮತ್ತು ಶಕ್ತಿಯ ಕೊರತೆಗೆ ಕಾರಣವಾಗಬಹುದು. ನಿದ್ರೆ ಮಾಡಲು ಕಷ್ಟವಾಗುತ್ತದೆ ಮತ್ತು ಇದು ಒಟ್ಟಾರೆ ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
ಕರಿದ ಆಹಾರಗಳು
ಕರಿದ ಆಹಾರಗಳು ನಿದ್ರೆಗೆ ಮಾರಕ. ರಾತ್ರಿಯ ಊಟದಲ್ಲಿ ಫ್ರೈಸ್, ಫ್ರೈಡ್ ಚಿಕನ್ ಮತ್ತು ಡೋನಟ್ಸ್‍ನಂತಹ ಜಿಡ್ಡಿನ, ಹೆಚ್ಚಿನ ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಕಾಡಬಹುದು ಮತ್ತು ಕಡಿಮೆ ನಿದ್ರೆಗೆ ಕಾರಣವಾಗಬಹುದು. ವಿಶ್ರಾಂತಿ ಮತ್ತು ಉತ್ತಮ ರಾತ್ರಿಯ ನಿದ್ರೆಯನ್ನು ಉತ್ತೇಜಿಸಲು ರಾತ್ರಿ ಊಟದಲ್ಲಿ ಕರಿದ ಆಹಾರಗಳನ್ನು ತಪ್ಪಿಸಿ.
ಸಿಟ್ರಸ್ ಆಹಾರಗಳು
ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ನಿಂಬೆಯಂತಹ ಸಿಟ್ರಸ್ ಹಣ್ಣುಗಳನ್ನು ರಾತ್ರಿ ಊಟದಲ್ಲಿ ಸೇವಿಸುವುದು ಹೊಟ್ಟೆ ನೋವು, ಆ್ಯಸಿಡ್ ರಿಫ್ಲಕ್ಸ್ ಮುಂತಾದ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದಾಗಿ ನಿದ್ರೆ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಶಾಂತಿಯುತ ಮತ್ತು ವಿಶ್ರಾಂತಿ ರಾತ್ರಿಯ ನಿದ್ರೆಗಾಗಿ ಸಿಟ್ರಸ್ ಆಹಾರಗಳನ್ನು ತಪ್ಪಿಸಿ.
ಚೀಸ್
ಚೀಸ್ ಅನ್ನು ಬಳಸಿ ತಯಾರಿಸುವಂತಹ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆ, ಹೊಟ್ಟೆಯುಬ್ಬರ ಸಮಸ್ಯೆಗೆ ಕಾರಣವಾಗಬಹುದು. ಇದರಿಂದಾಗಿ ನಿದ್ರೆ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ, ರಾತ್ರಿಯಲ್ಲಿ ಆರಾಮದಾಯಕ ನಿದ್ರೆಗೆ ಇದು ಉತ್ತಮ ಆಯ್ಕೆಯಲ್ಲ.