Thursday, 19th September 2024

Football Stadium : ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಲಿವೆ 19 ಫುಟ್ಬಾಲ್‌ ಸ್ಟೇಡಿಯಮ್‌ಗಳು

football stadium

ಬೆಂಗಳೂರು: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಕ್ರೀಡಾ ಕ್ಷೇತ್ರಕ್ಕೆ ಬೆಂಬಲ ನೀಡುವ ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ. ರಾಜ್ಯದ ಅಲ್ಲಲ್ಲಿ ಅತ್ಯಾಧುನಿಕ ಕ್ರೀಡಾಂಗಣಗಳನ್ನು ನಿರ್ಮಿಸಿ ಯುವ ಪ್ರತಿಭೆಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿರು ಅವರು ಈ ಬಾರಿ 18 ಫುಟ್ಬಾಲ್‌ ಸ್ಟೇಡಿಯಮ್‌ಗಳನ್ನು (Football Stadium) ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.  ಲಕ್ನೋದ ಕೆಡಿ ಸಿಂಗ್ ಬಾಬು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲ ಕೋಲ್ಕತಾ ಡರ್ಬಿ ಫುಟ್ಬಾಲ್‌ ಪಂದ್ಯದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಜರಿದ್ದರು. ಅವರು ರಾಜ್ಯದಲ್ಲಿ ಕ್ರೀಡೆಯನ್ನು ಸುಧಾರಿಸುವ ಉದ್ದೇಶದಿಂದ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಫುಟ್ಬಾಲ್‌ ಸ್ಟೇಡಿಯಮ್‌ ಸೇರಿಕೊಂಡಿದೆ.

ಭಾರತೀಯ ಫುಟ್ಬಾಲ್‌ನ ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಕ್ಲಬ್‌ಗಳಾದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ಈ ಪಂದ್ಯದಲ್ಲಿ ಸೆಣಸಾಡಿದವು. ಈ ವೇಳೆ  ಸಿಎಂ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಫುಟ್ಬಾಲ್ ಅನ್ನು ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರದ ಬದ್ಧವಾಗಿದೆ ಪ್ರತಿಜ್ಞೆ ಮಾಡಿದರು. ಆರಂಭಿಕ ಹಂತವಾಗಿ ರಾಜ್ಯದ 18 ಕಮಿಷನರೇಟ್‌ಗಳಲ್ಲಿ 18 ಹೊಸ ಫುಟ್ಬಾಲ್ ಕ್ರೀಡಾಂಗಣಗಳನ್ನು ನಿರ್ಮಿಸುವ ಯೋಜನೆಯನ್ನು ಸಿಎಂ ಆದಿತ್ಯನಾಥ್ ಘೋಷಿಸಿದರು. ಇದಲ್ಲದೆ, ಫುಟ್ಬಾಲ್ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ರಾಜ್ಯಾದ್ಯಂತ ಹೆಚ್ಚಿನ ಪಂದ್ಯಾವಳಿಗಳಿಗೆ ಅನುಕೂಲವಾಗುವಂತೆ ಪ್ರತಿ ಬ್ಲಾಕ್‌ಗಳಲ್ಲಿ 827 ಫುಟ್ಬಾಲ್ ಮೈದಾನಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಆದಿತ್ಯನಾಥ್ ಅವರ ಉಪಸ್ಥಿತಿಯಲ್ಲಿ ಡರ್ಬಿ ಪಂದ್ಯಕ್ಕೆ ಮೊದಲು ಮಾತನಾಡಿದ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಶ್ರೀ ಕಲ್ಯಾಣ್ ಚೌಬೆ,  ಡರ್ಬಿ ಪಂದ್ಯಕ್ಕಾಗಿ ಕೆಡಿ ಸಿಂಗ್ ಬಾಬು ಕ್ರೀಡಾಂಗಣವನ್ನು ನವೀಕರಿಸಲು ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಪ್ರಯತ್ನ ಅಮೋಘವಾಗಿದೆ ಎಂದು ಹೊಗಳಿದರು.

“ಆಗಸ್ಟ್ 8 ರಂದು, ನಿಮ್ಮನ್ನು (ಯೋಗಿ) ಭೇಟಿ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಫುಟ್ಬಾಲ್ ಬಗ್ಗೆ ನಿಮ್ಮ ಪ್ರೀತಿ ಮತ್ತು ಸಮರ್ಪಣೆಯನ್ನು ಅರಿತುಕೊಂಡ ನಂತರ ನಾನು ನಿಮಗೆ ವಿನಂತಿ ಮಾಡಿದ್ದೆ. ಡರ್ಬಿಯಂತಹ ಪಂದ್ಯವನ್ನು ಲಕ್ನೋದಲ್ಲಿ ಆಡಿದರೆ, ಯುಪಿಯಲ್ಲಿ ಫುಟ್ಬಾಲ್ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ನಾನು ಹೇಳಿದೆ. ಆದರೆ ಪಂದ್ಯವನ್ನು ಆಯೋಜಿಸಲು ಉತ್ತಮ ಕ್ರೀಡಾಂಗಣವನ್ನು ಹೊಂದಿಸುವುದು ಸಮಸ್ಯೆಯಾಗಬಹುದು ಎಂದು ಕೊಂಡಿದ್ದೆ. ಆದರೆ ನನಗೆ ಆಶ್ಚರ್ಯವಾಗುವಂತೆ, ಯುಪಿ ಸರ್ಕಾರವು  ಕೆಡಿ ಸಿಂಗ್ ಬಾಬು ಕ್ರೀಡಾಂಗಣವನ್ನು ನವೀಕರಿಸಲು ಕೇವಲ 19 ದಿನಗಳನ್ನು ತೆಗೆದುಕೊಂಡಿತು. ಇದು ಲಕ್ನೋ ನಗರದ ಪ್ರತಿಯೊಬ್ಬ ಫುಟ್ಬಾಲ್ ಪ್ರೇಮಿಗೆ ಬಹಳ ಸಂತೋಷದ ವಿಷಯ ಎಂದು ಚೌಬೆ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Paris Paralympics: ಬೆಳ್ಳಿ ಗೆದ್ದ ಸಚಿನ್ ಖಿಲಾರಿ; 21ಕ್ಕೇರಿದ ಭಾರತದ ಪದಕ ಬೇಟೆ

“ಉತ್ತರ ಪ್ರದೇಶ ಸರ್ಕಾರ ಮತ್ತು ಅದರ ಜನರ ಪರವಾಗಿ ಮೋಹನ್ ಬಗಾನ್ ಎಸ್ಜಿ ಮತ್ತು ಈಸ್ಟ್ ಬೆಂಗಾಲ್ ಎಫ್ಸಿ ತಂಡಗಳಿಗೆ ನನ್ನ ಹೃತ್ಪೂರ್ವಕ ಸ್ವಾಗತ ನೀಡಲು ನಾನು ಬಯಸುತ್ತೇನೆ. ಈ ಪ್ರತಿಷ್ಠಿತ ಪಂದ್ಯವನ್ನು ನಮ್ಮ ರಾಜ್ಯದ ರಾಜಧಾನಿ ಲಕ್ನೋದಲ್ಲಿ ಮೊದಲ ಬಾರಿಗೆ ಆಡುತ್ತಿರುವುದು ನಮಗೆ ಬಹಳ ಮಹತ್ವದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುನ್ನಡೆಸಿದ ಖೇಲೋ ಇಂಡಿಯಾ ಉಪಕ್ರಮವು ಭಾರತದಲ್ಲಿ ಕ್ರೀಡೆಯನ್ನು ಮುನ್ನಡೆಸುತ್ತಿದೆ” ಎಂದು ಹೇಳಿದರು.

ಎಐಎಫ್ಎಫ್ ಮುಖ್ಯಸ್ಥರೊಂದಿಗಿನ ತಮ್ಮ ಇತ್ತೀಚಿನ ಚರ್ಚೆಯನ್ನು ನೆನಪಿಸಿಕೊಂಡ ಸಿಎಂ ಆದಿನಾಥ್, “ನಾನು ಮೂರು ವಾರಗಳ ಹಿಂದೆ ಶ್ರೀ ಚೌಬೆ ಅವರನ್ನು ಭೇಟಿಯಾದಾಗ, ಅವರು ಉತ್ತರ ಪ್ರದೇಶದಲ್ಲಿ ಫುಟ್ಬಾಲ್ ಅನ್ನು ಜನಪ್ರಿಯಗೊಳಿಸಲು ವೇದಿಕೆ ಬಯಸಿದ್ದರು ಮತ್ತು ಕ್ರೀಡೆಗೆ ಸರ್ಕಾರದ ಬೆಂಬಲ ದೊರೆತರೆ ಪ್ರಕ್ರಿಯೆಯನ್ನು ವೇಗಗೊಳಿಸಬಹುದು ಎಂದು ಹೇಳಿದರು” ಎಂದು ಹೇಳಿದರು.