Wednesday, 8th January 2025

Foreign Assets Disclosure: ವಿದೇಶಿ ಮೂಲದ ಆಸ್ತಿ ಇದ್ದರೆ ಜನವರಿ 15ರೊಳಗೆ ವಿವರ ಸಲ್ಲಿಸಿ

Foreign Assets Disclosure

ಹೊಸದಿಲ್ಲಿ: ಭಾರತೀಯ ನಿವಾಸಿಗಳು ವಿದೇಶಗಳಲ್ಲಿ ಹೊಂದಿರುವ ಆಸ್ತಿಗಳ ವಿವರಗಳನ್ನು ಜನವರಿ 15ರೊಳಗೆ ಸಲ್ಲಿಸಲು ಗಡುವನ್ನು ನಿಗದಿಪಡಿಸಲಾಗಿದೆ. ಆದಾಯ ತೆರಿಗೆ ಕಾಯಿದೆಯ ಶೆಡ್ಯೂಲ್‌ ಎಫ್‌ಎ, ಎಫ್‌ಎಸ್‌ಐ ಮತ್ತು ಟಿಆರ್‌ ಅನ್ನು ಬಳಸಿಕೊಂಡು ತೆರಿಗೆದಾರರು ತಮ್ಮ ಐಟಿಆರ್‌ನಲ್ಲಿ ಗ್ಲೋಬಲ್‌ ಫೈನಾನ್ಷಿಯಲ್‌ ಅಕೌಂಟ್‌ಗಳ ಬಗ್ಗೆ ರಿಪೋರ್ಟ್‌ ಮಾಡಬೇಕಾಗುತ್ತದೆ (Foreign Assets Disclosure).

ಸಿಆರ್‌ಎಸ್‌ ಫ್ರೇಮ್‌ವರ್ಕ್‌ (Common reporting standard), ಎಫ್‌ಎಟಿಸಿಎ (Foreign account tax compliance) ಚೌಕಟ್ಟಿನಡಿಯಲ್ಲಿ ವಿದೇಶಿ ಆಸ್ತಿಗಳನ್ನು ಘೋಷಿಸಬೇಕಾಗುತ್ತದೆ ಎಂದು ಅದಾಯ ತೆರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ. 2024-25 ಮೌಲ್ಯ ಮಾಪನಾ ವರ್ಷವಾಗಿದೆ.

ಭಾರತೀಯ ತೆರಿಗೆದಾರರಿಗೆ ಡಿಸ್‌ಕ್ಲೋಸರ್‌ ಅಗತ್ಯ: ಭಾರತೀಯ ನಿವಾಸಿಗಳು ಆದಾಯ ತೆರಿಗೆ ಕಾಯಿದೆ 1961ರ ಅಡಿಯಲ್ಲಿ ತಮ್ಮ ವಿದೇಶಿ ಮೂಲದ ಆಸ್ತಿಗಳ ವಿವರಗಳನ್ನು ಐಟಿ ರಿಟರ್ನ್‌ನಲ್ಲಿ ತಿಳಿಸಬೇಕಾಗುತ್ತದೆ. ಶೆಡ್ಯೂಲ್‌ ಎಫ್‌ಎ: ವಿದೇಶಿ ಆಸ್ತಿಗಳನ್ನು ತಿಳಿಸಲು ಬಳಸುವ ವಿಭಾಗ. ಶೆಡ್ಯೂಲ್‌ ಎಫ್‌ಎಸ್‌ಐ ಅಡಿಯಲ್ಲಿ ವಿದೇಶಿ ಮೂಲದ ಆದಾಯವನ್ನು ತಿಳಿಸಬೇಕು. ಶೆಡ್ಯೂಲ್‌ ಟಿಆರ್‌ ಪ್ರಕಾರ ವಿದೇಶಗಳಲ್ಲಿ ಪಾವತಿಸಿದ ತೆರಿಗೆಗೆ ತೆರಿಗೆ ವಿನಾಯಿತಿಯನ್ನು ಕ್ಲೇಮ್‌ ಮಾಡಬಹುದು. ಈ ತೆರಿಗೆ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಮಾಡುವುದರಿಂದ ಕಾನೂನು ಅಡೆಡೆಗಳಿಂದ ಪಾರಾಗಬಹುದು.

ಆದಾಯ ತೆರಿಗೆ ಇಲಾಖೆಯು 2023-24ರ ಪರಿಷ್ಕೃತ ಐಟಿಆರ್‌ ಸಲ್ಲಿಕೆಗೆ ಗಡುವನ್ನು 2024ರ ಡಿಸೆಂಬರ್‌ 31ರಿಂದ 2025ರ ಜನವರಿ 15ಕ್ಕೆ ಪರಿಷ್ಕರಿಸಿತ್ತು. ವಾರ್ಷಿಕ 5 ಲಕ್ಷ ರೂ.ಗಳಿಂದ 7 ಲಕ್ಷ ರೂ. ಆದಾಯ ಇರುವ ತೆರಿಗೆದಾರರು 12,500 ರೂ.ಗಳಿಂದ 25,000 ರೂ. ತನಕ ಆದಾಯ ತೆರಿಗೆ ರಿಬೇಟ್‌ ಅನ್ನು ಸೆಕ್ಷನ್‌ 87 ಎ ಅಡಿಯಲ್ಲಿ ಪಡೆದುಕೊಳ್ಳಬಹುದು. ಈ ಕುರಿತ ಐಟಿಆರ್‌ ಫಾರ್ಮ್‌ ಅನ್ನು ಅಪ್‌ ಡೇಟ್‌ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಸಿಬಿಡಿಟಿ ಬಿಡುಗಡೆಗೊಳಿಸಿದ ವರದಿಯ ಪ್ರಕಾರ 2023-24ರಲ್ಲಿ ತೆರಿಗೆದಾರರ ಸಂಖ್ಯೆ 10.4 ಕೋಟಿಗೆ ಏರಿಕೆಯಾಗಿದೆ. ಇದು 2014-15ರಲ್ಲಿ 5.7 ಕೋಟಿಯಷ್ಟಿತ್ತು. ಐಟಿಆರ್‌ ಸಲ್ಲಿಸಿದವರನ್ನು ಹಾಗೂ ಟಿಡಿಎಸ್‌ ಅಡಿಯಲ್ಲಿ ತೆರಿಗೆ ಕಡಿತ ಆಗಿದ್ದನ್ನೂ ತೆರಿಗೆದಾರರು ಎಂದು ಇಲಾಖೆ ಪರಿಗಣಿಸಿದೆ. 2023-24ರಲ್ಲಿ ಒಟ್ಟು 19.6 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿತ್ತು. 2014-15ರಲ್ಲಿ 7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿತ್ತು.

ಈ ಸುದ್ದಿಯನ್ನೂ ಓದಿ: Stock Market: ಬೆಂಗಳೂರಿನಲ್ಲಿ ಚೀನಾ ವೈರಸ್‌- ಸೆನ್ಸೆಕ್ಸ್‌ 1,200 ಅಂಕ ಕುಸಿತ; ಪಿಎಸ್‌ಯು ಬ್ಯಾಂಕ್‌, ರಿಯಾಲ್ಟಿ, ತೈಲ ಷೇರು ಭಾರಿ ಪತನ

Leave a Reply

Your email address will not be published. Required fields are marked *