Thursday, 12th December 2024

ಅಫ್ಘಾನಿಸ್ತಾನದಿಂದ ಮರಳಿದವರಿಗೆ ಉಚಿತ ಪೋಲಿಯೊ ಲಸಿಕೆ

ನವದೆಹಲಿ: ತಾಲಿಬಾನ್ ದಾಳಿಯಲ್ಲಿ ಸುರಕ್ಷಿತವಾಗಿ ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿ ದವರಿಗೆ ಉಚಿತ ಪೋಲಿಯೊ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಈಗಾಗಲೇ ನವದೆಹಲಿಗೆ ಬಂದಿಳಿದ ಆಫ್ಘನ್ ವಾಪಸಾತಿಗಳಿಗೆ ಪೋಲಿಯೋ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಜಗತ್ತಿನಲ್ಲಿ ಪೋಲಿಯೊ ಹಾವಳಿ ಇರುವ ದೇಶಗಳೆಂದರೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ. ಪೋಲಿಯೋ ಮುಕ್ತ ರಾಷ್ಟ್ರವಾಗಿರುವ ಭಾರತ ಇದೀಗ ಮುನ್ನೆಚ್ಚರಿಕಾ ದೃಷ್ಟಿಯಿಂದ ಆಫ್ಘನ್ ವಾಪಸಾತಿಗಳಿಗೆ ಪೋಲಿಯೊ ಲಸಿಕೆಯಾದ ಒಪಿವಿ ಮತ್ತು ಎಫ್ ಐ ಪಿ ವಿ ಲಸಿಕೆ ನೀಡಿದ್ದಾರೆ ಎಂದರು.

ಭಾನುವಾರ ಭಾರತ 168 ಮಂದಿಯನ್ನು ಯುದ್ಧಗ್ರಸ್ತ ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಿದೆ. ಅದಕ್ಕೂ ಮುನ್ನ ಭಾರತ ಕಾಬೂಲಿನ ತನ್ನ ದೂತವಾಸ ಸಿಬ್ಬಂದಿಯನ್ನು ಒಳಗೊಂಡಂತೆ ಒಟ್ಟು 200 ಮಂದಿಯನ್ನು ಸ್ಥಳಾಂತರ ಮಾಡಿತ್ತು. ನಂತರ ಎರಡನೇ ಸ್ಥಳಾಂತರ ಕಾರ್ಯಾಚರಣೆಯಲ್ಲಿ 150 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು.