Tuesday, 7th January 2025

frozen lake: ಹೆಪ್ಪುಗಟ್ಟಿದ್ದ ಸರೋವರದ ಮಧ್ಯೆ ಸಿಲುಕಿಕೊಂಡಿದ್ದ ಪ್ರವಾಸಿಗರು; ಶಾಕಿಂಗ್‌ ವಿಡಿಯೊ ಶೇರ್‌ ಮಾಡಿದ ಕೇಂದ್ರ ಸಚಿವ ರಿಜಿಜು

frozen lake

ಇಟಾನಗರ: ಚಳಿಗಾಲದಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಇತ್ಯಾದಿಗಳಲ್ಲಿ ಹೆಪ್ಪುಗಟ್ಟಿದ ಸರೋವರಗಳ (frozen lake) ಮೇಲೆ ಜನರು ಮೋಜು ಮಾಡುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಅರುಣಾಚಲ ಪ್ರದೇಶದ (Arunachal Pradesh) ಸೆಲಾ ಪಾಸ್‌ನ (Sela Pass) ಹೆಪ್ಪುಗಟ್ಟಿದ ಸರೋವರದ ಪ್ರವಾಸಿಗರ ಗುಂಪೊಂದು ಸಿಲುಕಿ ಪರದಾಡುತ್ತಿರುವ ಘಟನೆ ನಡೆದಿದ್ದು, ಕೇಂದ್ರ ಸಚಿವ ಕಿರಣ್‌ ರಿಜಿಜು (Kiren Rijiju) ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೆಪ್ಪುಗಟ್ಟಿದ ಸರೋವರದ ಮೇಲೆ ಪ್ರವಾಸಿಗರು ನಡೆದಾಡುತ್ತಿದ್ದರು. ಏಕಾಏಕಿ ಮಂಜುಗಡ್ಡೆಯ ಕುಸಿತ ಉಂಟಾಗಿದೆ. ಅಲ್ಲಿದ್ದ ಜನರ ಗುಂಪು ಸರೋವರದೊಳಗೆ ಬಿದ್ದಿದೆ. ಮೇಲೇಳಲಾಗದೆ ಸಹಾಯಕ್ಕಾಗಿ ಕಿರುಚಾಡಿದ್ದಾರೆ. ನಂತರ ಒಂದು ಕೋಲಿನ ಸಹಾಯದಿಂದ ಸುತ್ತಲಿನವರು ಮೇಲೆತ್ತಿದ್ದಾರೆ.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕಿರಣ್‌ ರಿಜಿಜು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಪ್ರವಾಸಿಗರಿಗೆ ಕಿವಿಮಾತು ಹೇಳಿದ್ದಾರೆ.

ಅರುಣಾಚಲ ಪ್ರದೇಶದ ಸೆಲಾ ಪಾಸ್‌ಗೆ ಆಗಮಿಸುವ ಪ್ರವಾಸಿಗರಿಗೆ ನನ್ನ ಸಲಹೆ: ಅನುಭವಿ ಜನರೊಂದಿಗೆ ಹೆಪ್ಪುಗಟ್ಟಿದ ಸರೋವರಗಳ ಮೇಲೆ ನಡೆಯಿರಿ, ಹಿಮ ಬಿದ್ದಿರುವ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಚಲಿಸಿ ಮತ್ತು ಹಿಮಪಾತದ ಬಗ್ಗೆ ತಿಳಿದಿರಲಿ. ತಾಪಮಾನವು ಹೆಪ್ಪುಗಟ್ಟುತ್ತಿದೆ ಆದ್ದರಿಂದ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಮತ್ತು ಆನಂದಿಸಿ. ನಿಮ್ಮ ಸುರಕ್ಷತೆ ಮುಖ್ಯ, ಎಂದು ರಿಜಿಜು ಹೇಳಿದ್ದಾರೆ.

ವೈರಲ್‌ ಆಗಿರುವ ವಿಡಿಯೋಗೆ ನೆಟ್ಟಿಗರು ಕಮೆಂಟ್‌ ಮಾಡಿದ್ದು, ದಯವಿಟ್ಟು ಜನರ ಸುರಕ್ಷತೆಗಾಗಿ ಎಚ್ಚರಿಕೆಯ ಫಲಕವನ್ನು ಒದಗಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು ಕಮೆಂಟ್‌ ಮಾಡಿದ್ದು, ಕಳೆದ ವರ್ಷವೂ ಇದೇ ರೀತಿ ಇಬ್ಬರು ನೀರಿನಲ್ಲಿ ಸಿಲುಕಿದ್ದರು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : DA Hike: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ

Leave a Reply

Your email address will not be published. Required fields are marked *