Sunday, 24th November 2024

ತೈಲ ಬೆಲೆಗಳು ನಿಜವಾಗಿಯೂ ಏರಿಕೆಯಾಗಿಲ್ಲ ಎಂದು ವಾದಿಸಿದ ಈ ಸಚಿವ ?

ಲಖನೌ: ದೇಶದಲ್ಲಿ ತೈಲ ಬೆಲೆ ಏರಿಕೆ ಟೀಕೆಗಳನ್ನು ತಳ್ಳಿಹಾಕಿದ ಉತ್ತರ ಪ್ರದೇಶ ಸಚಿವ ಉಪೇಂದ್ರ ತಿವಾರಿ, ಶೇ.ಕಡಾ 95 ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ. ಸಚಿವರ ಈ ಹೇಳಿಕೆ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

2014 ರಲ್ಲಿ ತಲಾ ಆದಾಯಕ್ಕೆ ಹೋಲಿಸಿದರೆ ತೈಲ ಬೆಲೆಗಳು ನಿಜವಾಗಿಯೂ ಏರಿಕೆಯಾಗಿಲ್ಲ ಎಂದು ತಿವಾರಿ ವಾದಿಸಿದ್ದಾರೆ.

ಇಂದು, ನಾಲ್ಕು-ಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮತ್ತು ಪೆಟ್ರೋಲ್ ಬಳಸುವ ಕೆಲವೇ ಜನ ಇದ್ದಾರೆ. ಪ್ರಸ್ತುತ, ಶೇ. 95 ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ತೈಲ ಬೆಲೆ ಏರಿಕೆ ವಾಸ್ತವಿಕವಾಗಿ ಪ್ರತಿಯೊಬ್ಬ ನಾಗರಿಕನ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ದೇಶದ ಇನ್ನೊಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಾಗಿಸುವ ಆಹಾರ ಧಾನ್ಯ, ಹಣ್ಣು ಮತ್ತು ತರಕಾರಿಗಳು ಸೇರಿದಂತೆ ಎಲ್ಲಾ ಸರಕುಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಅದು ಕಾರಣವಾಗುತ್ತದೆ ಎಂದಿದ್ದಾರೆ.

ನೀವು 2014 ರ ಮೊದಲು ಮತ್ತು ಈಗಿನ ಅಂಕಿಅಂಶಗಳನ್ನು ತೆಗೆದುಕೊಳ್ಳುತ್ತೀರಿ. ಮೋದಿಜಿ ಮತ್ತು ಯೋಗಿಜಿ ಸರ್ಕಾರಗಳು ರಚನೆಯಾದ ನಂತರ ತಲಾ ಆದಾಯವು ದ್ವಿಗುಣಗೊಂಡಿದೆ’ ಎಂದು ಹೇಳಿದ್ದಾರೆ.