Sunday, 15th December 2024

ಗಡ್ಚಿರೋಲಿ ಎನ್ ಕೌಂಟರ್: 13 ನಕ್ಸಲೀಯರ ಸಾವು

ಮಹಾರಾಷ್ಟ್ರ/ಗಡ್ಚಿರೊಲಿ: ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಡೆದ ಭಾರೀ ಎನ್ ಕೌಂಟರ್ ನಲ್ಲಿ ಕನಿಷ್ಠ 13 ನಕ್ಸಲೀಯರು ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಗಡ್ಚಿರೋಲಿ ಅರಣ್ಯ ಪ್ರದೇಶದ ಎಟಪಲ್ಲಿಯಲ್ಲಿ ಸಿ-60 ಕಮಾಂಡೊ ಪೊಲೀಸರು ಮತ್ತು ನಕ್ಸಲೀಯರ ಮಧ್ಯೆ ಭಾರೀ ಗುಂಡಿನ ಚಕಮಕಿ ನಡೆಯಿತು. 13 ಮಂದಿ ನಕ್ಸಲರು ಮೃತಪಟ್ಟರು ಎಂದು ಗಡ್ಚೊಲಿ ಜಿಲ್ಲೆಯ ಡಿಐಜಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.