Sunday, 15th December 2024

ಹೈದರಾಬಾದ್​ನಲ್ಲಿ ಗಣಪತಿ ಲಡ್ಡು 1.20ಕೋಟಿಗೆ ಹರಾಜು

ಹೈದರಾಬಾದ್​: ನಗರದಲ್ಲಿ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲಾಗಿದ್ದು, ನಿಮಜ್ಜನ ಮೆರವಣಿಗೆಯೂ ವಿಜೃಂಭಣೆ ಯಿಂದ ನಡೆಯುತ್ತಿದೆ. ಮತ್ತೊಂದೆಡೆ, 9 ದಿನ ಪೂಜೆ ಸಲ್ಲಿಸಿ ಗಣಪನಿಗೆ ಅರ್ಪಿಸಲಾಗಿರುವ ಲಡ್ಡು ಹರಾಜು ಕೂಡ ಮಾಡಲಾಗು ತ್ತಿದೆ.

ಪಡೆಯಲು ಭಕ್ತರು ಪೈಪೋಟಿ ನಡೆಸುತ್ತಿದ್ದಾರೆ. ಇದೀಗ ಹೈದರಾಬಾದ್​ನ ಬಂಡ್ಲಗೂಡ ಗಣಪನ ಲಡ್ಡು ದಾಖಲೆಯ ಬೆಲೆಗೆ ಹರಾಜಾಗಿದೆ. ಬರೋಬ್ಬರಿ 1.20 ಕೋಟಿ ರೂಗೆ ಕೀರ್ತಿ ರಿಚ್​ಮಂಡ್​ ವಿಲ್ಲ ಕಮ್ಯೂನಿಟಿ ಗ್ರೂಪ್​ ಈ ಲಡ್ಡುವನ್ನು ಪಡೆದುಕೊಂಡಿ ದ್ದಾರೆ. ಕಳೆದ ವರ್ಷ ಇದೇ ಗಣಪನ ಲಡ್ಡು 60.80 ಲಕ್ಷ ರೂಗೆ ಬಿಕರಿಯಾಗಿತ್ತು.

ಈ ಬಾರಿ ದಾಖಲೆಯ ಮೊತ್ತಕ್ಕೆ ಹರಾಜಾಗಿರುವುದು ವಿಶೇಷ. 2021ರಲ್ಲಿ 41 ಲಕ್ಷ ರೂ ಗೆ ಲಡ್ಡು ಹರಾಜುಗೊಂಡಿತ್ತು.