Saturday, 14th December 2024

Gifts For Employees: 28 ಕಾರು, 29 ಬೈಕ್‌ಗಳನ್ನು ಉದ್ಯೋಗಿಗಳಿಗೆ ಉಡುಗೊರೆ ನೀಡಿದ ಕಂಪನಿ!

Gifts For Employees

ಚೆನ್ನೈ: ಉದ್ಯೋಗಿಗಳು (Employees) ಚೆನ್ನಾಗಿ ಕಾರ್ಯನಿರ್ವಹಿಸಬೇಕು, ಇದಕ್ಕಾಗಿ ಅವರು ಹೆಚ್ಚು ಪರಿಶ್ರಮ ಪಡಬೇಕು ಎಂದು ಪ್ರೇರೇಪಿಸಲು ಚೆನ್ನೈ (Chennai) ಮೂಲದ ಸಂಸ್ಥೆಯೊಂದು ತನ್ನ ಉದ್ಯೋಗಿಗಳಿಗೆ 28 ಕಾರು ಮತ್ತು 29 ಬೈಕ್‌ಗಳನ್ನು ಉಡುಗೊರೆಯಾಗಿ (Gifts For Employees) ನೀಡಿದೆ!

ಹ್ಯುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡಿಸ್ ಬೆಂಜ್‌ನಿಂದ ಹಿಡಿದು ವಿವಿಧ ಹೊಚ್ಚ ಹೊಸ ಮಾದರಿಯ ಕಾರುಗಳನ್ನು ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗಾಗಿ ಗೌರವಿಸಿ ನೀಡಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಶೇರಿಂಗ್ ಈಸ್ ಕೇರಿಂಗ್” ಕಾರ್ಯಕ್ರಮದಲ್ಲಿ ಇದನ್ನು ಉದ್ಯೋಗಿಗಳಿಗೆ ಟೀಮ್ ಡಿಟೇಲಿಂಗ್ ಸೊಲ್ಯೂಷನ್ಸ್ ಎಂಡಿ ಮತ್ತು ಸಂಸ್ಥಾಪಕ ಶ್ರೀಧರ್ ಕಣ್ಣನ್ ಅವರು ಹಸ್ತಾಂತರಿಸಿದರು.

ಉಕ್ಕಿನ ವಿನ್ಯಾಸ ಮತ್ತು ವಿವರಗಳನ್ನು ನೀಡುವ ಕಂಪನಿಯು ಕಳೆದ ಆರು ವರ್ಷಗಳಿಂದ ಉದ್ಯೋಗಿಗಳಿಗೆ ಸೇವಾ ಪ್ರೋತ್ಸಾಹ ಉಡುಗೊರೆಗಳನ್ನು ನೀಡುತ್ತಿದೆ. 10 ವರ್ಷಗಳ ಸೇವಾ ಪ್ರೋತ್ಸಾಹ, ಪ್ರಾಜೆಕ್ಟ್ ಪ್ರೋತ್ಸಾಹ, ಮದುವೆಯ ಪ್ರೋತ್ಸಾಹ ಇತ್ಯಾದಿಗಳ ಮೂಲಕ ಉದ್ಯೋಗಿಗಳನ್ನು ಗೌರವಿಸುತ್ತಿವೆ.

Gifts For Employees

ಉದ್ಯೋಗಿಗಳ ಕೊಡುಗೆಗಳನ್ನು ಗುರುತಿಸಿ ಪುರಸ್ಕರಿಸಲು ಮತ್ತು ಕಂಪನಿಗೆ ಅವರ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಕಣ್ಣನ್ ತಿಳಿಸಿದ್ದಾರೆ.

Noel Tata : ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ನೋಯೆಲ್‌ ಟಾಟಾ ನೇಮಕ

ಕಂಪನಿಯ ಯಶಸ್ಸಿಗೆ ದುಡಿಯುವ ಅವರ ಪ್ರಯತ್ನಗಳಿಗಾಗಿ ನಾವು ನಮ್ಮದೇ ಆದ ರೀತಿಯಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಉದ್ಯೋಗಿಗಳು ನಮ್ಮ ದೊಡ್ಡ ಆಸ್ತಿ ಎಂದು ನಾವು ನಂಬಿದ್ದೇವೆ ಎಂದು ಅವರು ಹೇಳಿದ್ದಾರೆ.