Thursday, 12th December 2024

ಗೋವಾದಲ್ಲಿ ನಾಳೆ ಸಂಜೆಯಿಂದ ’ಲಾಕ್’ ಡೌನ್

ಪಣಜಿ: ಗೋವಾದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಲಾಕ್​ಡೌನ್​ ಘೋಷಿಸಿ ಆದೇಶ ಹೊರಡಿಸಲಾಗಿದೆ. ಕರ್ನಾಟಕದಲ್ಲಿ ಲಾಕ್​ಡೌನ್​ ಜಾರಿ ಯಾದ ಬೆನ್ನಲ್ಲೇ ಇದೀಗ ನೆರೆ ರಾಜ್ಯ ಗೋವಾದಲ್ಲೂ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ.

ರಾಜ್ಯದಲ್ಲಿ ಏ.29ರ ಸಂಜೆ 7 ಗಂಟೆಯಿಂದ ಮೇ 3ರ ಬೆಳಗ್ಗೆಯವರೆಗೂ ಲಾಕ್​ಡೌನ್​ ಜಾರಿಯಲ್ಲಿರಲಿದೆ. ಈ ಸಮಯದಲ್ಲಿ ಅಗತ್ಯ ಸಾಮಾಗ್ರಿ ಅಂಗಡಿಗಳು ಹಾಗೂ ಕೈಗಾರಿಕೆಗಳು ಕೆಲಸ ನಿರ್ವಹಿಸಬಹುದು. ವೈದ್ಯಕೀಯ ವಲಯ ಎಂದಿನಂತೆ ಕೆಲಸ ಮಾಡಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ.

ಸರಕು ವಾಹನಗಳಿಗೆ ಅಂತರರಾಜ್ಯ ಸಂಚಾರಕ್ಕೆ ಅವಕಾಶವಿದೆ. ಉಳಿದಂತೆ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಲಾಗಿದೆ. ಗೋವಾದಲ್ಲಿ ಮಂಗಳವಾರ 2,110 ಕರೋನಾ ಪ್ರಕರಣಗಳು ಕಾಣಿಸಿಕೊಂಡಿವೆ. ಒಂದೇ ದಿನದಲ್ಲಿ 31 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.