ನವದೆಹಲಿ: ದಿವಾಳಿಯಿಂದ ರಕ್ಷಿಸಬೇಕೆಂದು ಮಾಡಿದ ಮನವಿಗೆ ಎನ್ಸಿಎಲ್ಟಿ ಸಮ್ಮತಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಹುತೇಕ ಸಮಾಪ್ತಿಯಾಗುವಂತಿದ್ದ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಗೆ ಮರುಜೀವ ಸಿಕ್ಕಂತಾಗಿದೆ.
ದಿವಾಳಿ ಪರಿಹಾರ ವಿಚಾರದಲ್ಲಿ ನುರಿತ ಪರಿಣಿತರೊಬ್ಬರನ್ನು ಎನ್ಸಿಎಲ್ಟಿ ನೇಮಿಸಿದೆ. ಇವರು ಸಂಸ್ಥೆ ಹಾಗು ಅದರ ವಿಮಾನಗಳ ಗುತ್ತಿಗೆದಾರ ಸಂಸ್ಥೆಗಳ ಮಧ್ಯೆ ಮಾತುಕತೆ ನಡೆಸಿ ಒಂದು ಪರಿಹಾರ ಯೋಜನೆಯನ್ನು ರೂಪಿಸುವ ನಿರೀಕ್ಷೆ ಇದೆ.
ಅಲ್ಲಿಯವರೆಗೂ ಗೋ ಫಸ್ಟ್ ಸಣ್ಣ ಮಟ್ಟದಲ್ಲಿ ತನ್ನ ಸೇವೆಯನ್ನು ಪುನಾರಂಭಿಸಲಿದೆ. ಮೇ 24ರಿಂದ ಗೋ ಫಸ್ಟ್ನ 20 ವಿಮಾನಗಳು ಓಡಾಟ ನಡೆಸಲಿವೆಯಂತೆ.
ಆರಂಭದಲ್ಲಿ ವಿಮಾನ ಹಾರಾಟವು ವಾರಕ್ಕೆ 1,200 ಫ್ಲೈಟ್ಗೆ ಸೀಮಿತವಾಗಿರುತ್ತದೆ.