Sunday, 15th December 2024

ಸಾರ್ವಕಾಲಿಕ ಎತ್ತರಕ್ಕೇರಿದ ನಿಫ್ಟಿ

ಮುಂಬೈ: ಬುಧವಾರ ಆರಂಭಿಕ ವಹಿವಾಟಿನ ವೇಳೆ ಬಿಎಸ್​ಇ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಾದರೆ, ನಿಫ್ಟಿ 13,100ರ ಗಡಿ ದಾಟಿ ಮತ್ತೆ ಸಾರ್ವಕಾಲಿಕ ಎತ್ತರಕ್ಕೆ ಮುನ್ನಡೆದಿದೆ.

ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ 44,825.37 ಅಂಶ ತಲುಪಿದ್ದು, ಬಳಿಕ 44,765.78 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು. ಎನ್‌ಎಸ್​ಇ ನಿಫ್ಟಿ ಇಂಟ್ರಾ ಡೇ ವಹಿವಾಟಿನಲ್ಲಿ 13,145.85 ಅಂಶ ತಲುಪಿ, ಬಳಿಕ 13, 131.40 ಅಂಶದಲ್ಲಿ ವಹಿವಾಟು ಮುಂದು ವರಿಸಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಒಎನ್​ಜಿಸಿ ಗರಿಷ್ಠ ಶೇಕಡ 5 ಏರಿಕೆ ದಾಖಲಿಸಿದರೆ, ಎಸ್​ಬಿಐ, ಐಸಿಐಸಿಐ ಬ್ಯಾಂಕ್​, ಬಜಾಜ್ ಆಟೋ, ಎಚ್​ಡಿಎಫ್​ಸಿ, ರಿಲಯನ್ಸ್ ಇಂಡಸ್ಟ್ರೀಸ್, ಏಕ್ಸಿಸ್ ಬ್ಯಾಂಕ್ ಷೇರುಗಳು ಲಾಭದಲ್ಲಿ ವಹಿವಾಟು ನಡೆಸಿವೆ.