ಬೆಂಗಳೂರು: ಹತ್ತು ವರ್ಷಗಳ ಉದ್ಯೋಗದ ಅನುಭವ ಹೊಂದಿರುವ ಬೆಂಗಳೂರಿನ (bangalore news) ಸಾಪ್ಟ್‌ವೇರ್ ಇಂಜಿನಿಯರ್ (Software Engineer) ಒಬ್ಬರ ಪ್ರೊಫೈಲ್ ಹಾಗೂ ಗೂಗಲ್ ಜಾಬ್ (google jobs) ಆಫರ್ ಲೆಟರ್ (Offer Letter) ಅನ್ನು ಅನಾಮಧೇಯವಾಗಿ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ. ಈ ವ್ಯಕ್ತಿಗೆ ಗೂಗಲ್ ಕಂಪನಿ ನೀಡಿದ ವಾರ್ಷಿಕ 65 ಲಕ್ಷ ರೂಪಾಯಿಗಳ ಸ್ಯಾಲರಿ ಪ್ಯಾಕೇಜ್ (Salary Package) ಈಗ ಅನೇಕ ಮಂದಿಯ ಹುಬ್ಬೇರುವಂತೆ (Viral news) ಮಾಡಿದೆ.
ಕಾರ್ತಿಕ್ ಜೋಲಾಪರಾ ಎಂಬವರು ಇದನ್ನು ʼಆಸಕ್ತಿದಾಯಕʼ ಎಂಬ ಶೀರ್ಷಿಕೆಯಲ್ಲಿ ಹಂಚಿಕೊಂಡರು. ಅವರು ಆಫರ್ ಲೆಟರ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು “ಕ್ರೇಜಿ ಆಫರ್‌ಗಳು” ಎಂಬ ಶೀರ್ಷಿಕೆಯೊಂದಿಗೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದವರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು “ಇದೇನೂ ಅಂಥ ಅಚ್ಚರಿದಾಯಕ ಆಫರ್ ಅಲ್ಲʼʼ ಎಂದಿದ್ದಾರೆ. ಇನ್ನು ಕೆಲವರು “3ನೇ ಶ್ರೇಣಿಯ ಕಾಲೇಜಿನಿಂದ ಬಂದ ಉದ್ಯೋಗಿಗೆ ಇದು ಅತ್ಯುತ್ತಮ ಆಫರ್” ಎಂದಿದ್ದಾರೆ.
ಈ ಉದ್ಯೋಗದ ಆಫರ್ ಪಡೆದ ವ್ಯಕ್ತಿ ಮೂರನೇ ಶ್ರೇಣಿಯ ಕಾಲೇಜ್ ಪದವೀಧರ. ಹೀಗಾಗಿ ಈ ಆಫರ್ ಆಸಕ್ತಿದಾಯಕವೆಂದು ಕೆಲವರು ಹೇಳಿದ್ದಾರೆ. “ಯಾವ 10 ವರ್ಷಗಳ ಅನುಭವದ ವ್ಯಕ್ತಿಗೆ ಇದು ಸಿಗಬಹುದು? ಕ್ರೇಜಿ ಆಫರ್” ಎಂದು ಸ್ಕ್ರೀನ್‌ಶಾಟ್ ಹಂಚಿಕೊಳ್ಳುವಾಗ ಜೋಲಾಪರಾ ಎಕ್ಸ್‌ನಲ್ಲಿ ಬರೆದಿದ್ದಾರೆ.
10 ವರ್ಷಗಳ ಅನುಭವ ಹೊಂದಿರುವ, ಶ್ರೇಣಿ 3 ಕಾಲೇಜಿನಿಂದ ಪದವಿ ಪಡೆದಿರುವ ಮತ್ತು CS ಅಲ್ಲದ ಹಿನ್ನೆಲೆ ಹೊಂದಿರುವ ವ್ಯಕ್ತಿಯೊಬ್ಬರು Googleನಿಂದ ಈ ಅಚ್ಚರಿದಾಯಕ ಕೊಡುಗೆಯನ್ನು ಹೇಗೆ ಪಡೆದುಕೊಂಡಿದ್ದಾರೆ ಎಂಬುದನ್ನು ಸ್ಕ್ರೀನ್‌ಶಾಟ್ ಬಹಿರಂಗಪಡಿಸುತ್ತದೆ. ಈ ಆಫರ್ ವಾರ್ಷಿಕ 65 ಲಕ್ಷ ರೂಪಾಯಿಗಳ ಸಂಬಳವನ್ನು ಒಳಗೊಂಡಿದೆ. ಜೊತೆಗೆ ಹೆಚ್ಚುವರಿ ಪರ್ಕ್‌ಗಳು: ರೂ. 9 ಲಕ್ಷ ವಾರ್ಷಿಕ ಬೋನಸ್, ರೂ. 19 ಲಕ್ಷ ಸೈನಿಂಗ್ ಬೋನಸ್ ಮತ್ತು ರೂ. 5 ಲಕ್ಷ ಸ್ಥಳಾಂತರ ಬೋನಸ್. ಈ ವ್ಯಕ್ತಿಗೆ ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆ ನೀಡಲಾಯಿತು. ಆಫರ್ ಅನ್ನು ವ್ಯಕ್ತಿ ಒಪ್ಪಿಕೊಂಡರು”.
what 10YOE can get you 😛
— Kartik Jolapara (@codingmickey) September 28, 2024
– crazy offers pic.twitter.com/1RVG5QRo8N
ವೈರಲ್ ಸ್ಕ್ರೀನ್‌ಶಾಟ್ ನೋಡಿದ ಒಬ್ಬ ವ್ಯಕ್ತಿ, “ಇದು ಈ ಫೀಲ್ಡ್‌ನಲ್ಲಿ ಸಾಮಾನ್ಯ ಅಲ್ಲವೇ? ಈ ಸಂಖ್ಯೆಗಳನ್ನು ನೋಡಿ ನನಗೆ ರೋಮಾಂಚನವಾಗಲಿಲ್ಲ” ಎಂದಿದ್ದಾರೆ. “ಕಾಮೆಂಟ್‌ಗಳಲ್ಲಿ ಬಹಳಷ್ಟು ಜನರು ಗೊಂದಲಕ್ಕೊಳಗಾಗಿದ್ದಾರೆ. ನೀವು ಎಲ್ಲವನ್ನೂ ಸೇರಿಸಿ ನೋಡಿ. ಮೊದಲ ವರ್ಷಕ್ಕೆ Google ಕೊಡುಗೆ 1.64 ಕೋಟಿ ಇದೆ. 10 ವರ್ಷಗಳ ಅನುಭವ ಪಡೆದ ವ್ಯಕ್ತಿ ಪೆದ್ದನಲ್ಲ” ಎಂದು ಇನ್ನೊಬ್ಬರು ಹೇಳಿದ್ದಾರೆ.
ಮತ್ತೊಬ್ಬರು, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸಂಖ್ಯೆಗಳಿಂದ ನಾನು ಪ್ರಭಾವಿತವಾಗಿಲ್ಲ. ನಾನು ಅದೇ ಕಂಪನಿಯಿಂದ ಉತ್ತಮ ಆಫರ್ ನೋಡಿದ್ದೇನೆ. 10 ವರ್ಷಗಳ ಅನುಭವ ಮತ್ತು L5 ಗೆ ಸಾಕಷ್ಟು ಪರಿಣತಿಯ ಅಗತ್ಯವಿದೆ” ಎಂದಿದ್ದಾರೆ. “ಈ ಪ್ಯಾಕೇಜನ್ನು 6-8 ವರ್ಷಗಳ ಅನುಭವ ಹೊಂದಿರುವ ಜನ ಪಡೆಯುವುದನ್ನು ನೋಡಬಹುದು. ಇನ್ನೂ ಹೆಚ್ಚಿನದನ್ನು ಪಡೆಯುವುದನ್ನು ನಾನು ನೋಡಿದ್ದೇನೆ. ಆದರೆ ಈದು ನಿಜವಾಗಿಯೂ ಉತ್ತಮ ಸಂಖ್ಯೆಯಾಗಿದೆ. ಅವನಿಗೆ ಶುಭ ಹಾರೈಸುತ್ತೇನೆ” ಎಂದು ಮತ್ತೊಬ್ಬರು ನುಡಿದಿದ್ದಾರೆ.
ಇದನ್ನೂ ಓದಿ: Viral News: 30 ಲಕ್ಷ ಪ್ಯಾಕೇಜ್, ಮೂರು ಬೆಡ್ ರೂಮ್ ಮನೆ! ವರನಿಗಾಗಿ ವಿಚ್ಛೇದಿತ ಮಹಿಳೆಯ ಡಿಮ್ಯಾಂಡ್