Sunday, 8th September 2024

ಕಾರು ಅಪಘಾತ: ರಾಜ್ಯಪಾಲ ಬಂಡಾರು ದತ್ತಾತ್ರೇಯ ಪಾರು

ಹೈದರಾಬಾದ್​: ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಂಚರಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 65 (ಹೈದರಾಬಾದ್​- ವಿಜಯವಾಡ)ರಲ್ಲಿ ಚೌಟುಪ್ಪಾಲ ಎಂಬಲ್ಲಿ ಅಪಘಾತಕ್ಕೀಡಾಗಿದೆ. ಹೈದರಾಬಾದ್​ನಿಂದ ನಲಗೊಂಡ ಜಿಲ್ಲೆಯಲ್ಲಿ ಆಯೋಜಿ ಸಲ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ.

ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಅದೃಷ್ಟ ವಶಾತ್ ಯಾವುದೇ ಗಂಭೀರ ಹಾನಿ ಇಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಚಾಲಕ ಸಡನ್​ ಆಗಿ ಎಡಕ್ಕೆ ಸ್ಟೀಯರಿಂಗ್ ತಿರುಗಿಸಿದ ಕಾರಣ ನಿಯಂತ್ರಣ ತಪ್ಪಿದ ಕಾರು ರಸ್ತೆ ಬಿಟ್ಟು ಕೆಳಕ್ಕೆ ಹಾರಿತ್ತು. ಯಾರಿಗೂ ಏನೂ ಆಗಿರಲಿಲ್ಲ. ಕೂಡಲೇ ಇನ್ನೊಂದು ಕಾರಿನಲ್ಲಿ ಪ್ರಯಾಣಿಸಿದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!