Sunday, 15th December 2024

ಮಹಾರಾಷ್ಟ್ರದಲ್ಲಿ ಕರೋನಾ ಇಳಿಕೆ: ಶಾಲೆ ರೀ ಓಪನ್ ಗೆ ಗ್ರೀನ್ ಸಿಗ್ನಲ್

ಮುಂಬೈ: ರಾಜ್ಯದಲ್ಲಿ ಕರೋನಾ ಪ್ರಕರಣಗಳು ಕೊಂಚ ಇಳಿಕೆ ಕಂಡ ನಂತರ, ಮಹಾರಾಷ್ಟ್ರ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪವನ್ನ ಅಂಗೀಕರಿಸಿ ಶಾಲೆ ರೀ ಓಪನ್ ಗೆ ಗ್ರೀನ್ ಸಿಗ್ನಲ್ ನೀಡಿದೆ‌.

ಜ.24 ರಿಂದ ಮಹಾರಾಷ್ಟ್ರದ ಪ್ರಾಥಮಿಕ ಹಾಗೂ ಪ್ರೌಡಶಾಲೆ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಆದೇಶ ಹೊರಡಿಸಿದೆ. ಆದರೆ ರಾಜ್ಯದ ಎಲ್ಲಾ ಭಾಗಗಳಿಗೂ ಈ ಆದೇಶ ಅನ್ವಯಿಸುವುದಿಲ್ಲ‌. ಕರೋನಾ ಪಾಸಿಟಿವಿಟಿ ರೇಟ್ ಅಥವಾ ಕಡಿಮೆ ಪ್ರಕರಣಗಳಿರುವ ಜಿಲ್ಲೆಗಳು ಅಥವಾ ಪ್ರದೇಶಗಳಲ್ಲಿ ಮಾತ್ರ ಭೌತಿಕ ಶಾಲೆಗಳನ್ನ ನಡೆಸಲು ಅನುಮತಿ ನೀಡಿದೆ.

ಫೆಬ್ರವರಿ 5 ನೇ ತಾರೀಖಿನವರೆಗು ಶಾಲೆಗಳನ್ನ ಮುಚ್ಚುವ ಆದೇಶ ಹೊರಡಿಸಲಾಗಿತ್ತು. ಆದರೆ ಈಗ ಈ ಆದೇಶದಿಂದ ಹಿಂದೆ ಸರಿದಿರುವ ಸರ್ಕಾರ ಪೋಷಕರ ಒತ್ತಾಯಕ್ಕೆ ಮಣೆ ಹಾಕಿದೆ.

ಕರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಮತ್ತೆ ಶಾಲೆಗಳನ್ನ ಬಂದ್ ಮಾಡಿತ್ತು. ಆದರೆ ಪೋಷಕರು ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿ ಶಾಲೆಗಳನ್ನ ಪುನರಾರಂಭಿಸುವಂತೆ ಒತ್ತಾಯಿಸಿದ್ದರು.