ಅಹ್ಮದಾಬಾದ್: ಮೋರ್ಬಿ ಸೇತುವೆ ಕುಸಿತ ಪ್ರಕರಣ(135 ಜನರ ಸಾವು) ದ ವಿಚಾರವಾಗಿ ತಾವು ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಗುಜರಾತಿನ ವಕೀಲರ ಸಂಘ ಘೋಷಣೆ ಮಾಡಿದೆ.
ಪ್ರಕರಣದಲ್ಲಿ ಬಂಧಿತರಾದ ಒಂಬತ್ತು ಆರೋಪಿಗಳನ್ನು ತಮ್ಮ ಸಂಘದ ಯಾವುದೇ ವಕೀಲರು ಪ್ರತಿನಿಧಿಸುವುದಿಲ್ಲ ಎಂದು ಗುಜರಾತ್ನ ಎರಡು ವಕೀಲರ ಸಂಸ್ಥೆಗಳು ನಿರ್ಧ ರಿಸಿವೆ.
ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಮೊರ್ಬಿ ಬಾರ್ ಅಸೋಸಿ ಯೇಷನ್ ಮತ್ತು ರಾಜ್ಕೋಟ್ ಬಾರ್ ಅಸೋಸಿಯೇಷನ್ ಈ ಪ್ರಕರಣದಲ್ಲಿ ಆರೋಪಿಗಳ ಪ್ರಕರಣವನ್ನು ವಕಾಲತ್ತಿಗೆ ತೆಗೆದುಕೊಳ್ಳದಿರಲು ಮತ್ತು ಅವರನ್ನು ಪ್ರತಿನಿಧಿಸದಿರಲು ನಿರ್ಧರಿಸಿದೆ.
ಪೊಲೀಸರು ಸೋಮವಾರ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏತನ್ಮಧ್ಯೆ, ಗುಜರಾತ್ನಲ್ಲಿ ಮೊರ್ಬಿ ಸೇತುವೆ ಕುಸಿತದ ತನಿಖೆಗಾಗಿ ನ್ಯಾಯಾಂಗ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ನ.14 ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮೊರ್ಬಿಯ ಮಚ್ಚು ನದಿಯ ಮೇಲೆ ಶತಮಾನಕ್ಕೂ ಹೆಚ್ಚು ಹಳೆಯದಾದ ಸೇತುವೆಯನ್ನು ವ್ಯಾಪಕ ದುರಸ್ತಿ ಮತ್ತು ನವೀ ಕರಣದ ನಂತರ ಐದು ದಿನಗಳ ಹಿಂದೆ ಮತ್ತೆ ತೆರೆಯಲಾಗಿತ್ತು. ಸೇತುವೆ ಕುಸಿದು ಬಿದ್ದಾಗ 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.