ಅಹ್ಮದಾಬಾದ್: ಗುಜರಾತ್‍ನಲ್ಲಿ 10 ವರ್ಷದ ಬಾಲಕಿಯೊಬ್ಬಳಿಗೆ ಇನ್ಸ್ಟಾಗ್ರಾಂನಲ್ಲಿ 16 ವರ್ಷದ ಹುಡುಗನೊಂದಿಗೆ ಪರಿಚಯವಾಗಿ(Love Case) ನಂತರ ಅವಳು ಅವನೊಂದಿಗೆ ಓಡಿಹೋದ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಬಾಲಕಿಯ ಕುಟುಂಬವು ದೂರು ದಾಖಲಿಸಿದ ಕೆಲವೇ ಗಂಟೆಗಳ ನಂತರ ಇಬ್ಬರನ್ನು ಹತ್ತಿರದ ಹಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ(Gujarat News).
ಈ ಜೋಡಿ ಇನ್ಸ್ಟಾಗ್ರಾಂನಲ್ಲಿ ಭೇಟಿಯಾದ ನಂತರ ಅವರ ನಡುವೆ ಪ್ರೀತಿ ಸಂಬಂಧ ಚಿಗುರಿ ಇಬ್ಬರು ಓಡಿಹೋಗುವ ಸಾಹಸಕ್ಕೆ ಇಳಿದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಡಿಸೆಂಬರ್ 31ರಂದು ಧನ್ಸುರಾ ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿಯಾದ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಾಳಂತೆ. ಮನೆಯವರು ಎಲ್ಲಾ ಕಡೆ ಹುಡುಕಾಡಿದ ನಂತರ, ಅವಳನ್ನು ಯಾರೋ ಅಪಹರಿಸಿದ್ದಾರೆ ಎಂದು ಹೆದರಿ ಆಕೆಯ ಕುಟುಂಬವು ದೂರು ದಾಖಲಿಸಿದ್ದಾರೆ.
ಬಾಲಕಿಯ ತಂದೆಗೆ ಆಕೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯಳಾಗಿರುವ ಬಗ್ಗೆ ತಿಳಿದಿರಲಿಲ್ಲ. ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆಯಲು ಅವಳು ತನ್ನ ತಾಯಿಯ ಫೋನ್ ಅನ್ನು ಬಳಸುತ್ತಿದ್ದಳು ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಅಲ್ಲಿ ಅವಳು ಆ ಹುಡುಗನನ್ನು ಸಂಪರ್ಕಿಸಿದ್ದಾಳೆ. ದೂರಿನ ನಂತರ, ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಿದ್ದಾರೆ. ಕುಟುಂಬದ ವರದಿಯ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ. ಮತ್ತು ಇಬ್ಬರೂ ಅಪ್ರಾಪ್ತ ವಯಸ್ಕರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.
ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, 15 ವರ್ಷದ ಬಾಲಕಿ ಮೀಡಿಯಾದಲ್ಲಿ ಭೇಟಿಯಾದ 27 ವರ್ಷದ ಯುವಕನೊಂದಿಗೆ ಪ್ರೀತಿಸಿ ಓಡಿಹೋಗಿದ್ದಳು. ವರದಿಯ ಪ್ರಕಾರ, ಇಬ್ಬರಿಗೂ ಮದುವೆ ಮಾಡಿಸುವಂತೆ ಇವರಿಬ್ಬರು ತಮ್ಮ ಹೆತ್ತವರಿಗೆ ಬೆದರಿಕೆ ಹಾಕಿದ್ದಾರೆ.
ಈ ಸುದ್ದಿಯನ್ನೂ ಓದಿ:ಡೇಂಜರಸ್ ಸ್ಟಂಟ್! ಹುಚ್ಚಾಟ ಮೆರೆದ ಯುವಕರಿಗೆ ಚುರುಕು ಮುಟ್ಟಿಸಿದ ಖಾಕಿ!
ಮತ್ತೊಂದು ಘಟನೆಯಲ್ಲಿ, ಮಧ್ಯಪ್ರದೇಶದ ನಾಗ್ಪುರದಲ್ಲಿ ಸೆಪ್ಟೆಂಬರ್ 25 ರಂದು ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದ ಅಪ್ರಾಪ್ತ ಬಾಲಕಿಯನ್ನು ಮಾನವ ಕಳ್ಳಸಾಗಣೆ ವಿರೋಧಿ ಘಟಕ (ಹೆಚ್‍ಎಸ್‍ಸಿ) ಪತ್ತೆ ಹಚ್ಚಿದೆ. ಬಾಲಕಿ ಆಟೋ ಚಾಲಕನೊಂದಿಗೆ ಓಡಿಹೋಗಿದ್ದಳು ಮತ್ತು 18 ವರ್ಷ ತುಂಬಿದ ನಂತರ ಅವನನ್ನು ಮದುವೆಯಾಗಿದ್ದಳು ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ಕುಡುಕ ತಂದೆಯ ಕಿರುಕುಳ ತಾಳಲಾರದೇ ಬಾಲಕಿ ತನ್ನ ತಾಯಿಯೊಂದಿಗೆ ನಾಗ್ಪುರಕ್ಕೆ ತೆರಳಿದ್ದಳು. ಅವರು ತಾಯಿಯ ಚಿಕ್ಕಪ್ಪನ ಮನೆಯ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸೆಪ್ಟೆಂಬರ್‌ನಲ್ಲಿ, ಬಾಲಕಿ ಕಾಣೆಯಾದಳು, ಅವಳ ತಾಯಿ ಮತ್ತು ಸಂಬಂಧಿಕರು ಅವಳನ್ನು ಹುಡುಕಾಡಿ ಸಿಗದಿದ್ದಾಗ ಕೊನೆಗೆ ಅವರು ಎಂಐಡಿಸಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಅಲ್ಲಿ ಅಪಹರಣ ಪ್ರಕರಣ ದಾಖಲಾಯಿಸಿದರು. ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿ ಬಾಲಕಿ ಆಟೋ ಚಾಲಕನೊಂದಿಗೆ ಓಡಿಹೋಗಿದ್ದಾಳೆ ಎಂದು ಕಂಡುಹಿಡಿದಿದ್ದಾರೆ.