Sunday, 15th December 2024

ಜೂನಿಯರ್ ಕ್ಲರ್ಕ್‌ಗಳ ಪರೀಕ್ಷೆ ಕೆಲವೇ ಗಂಟೆಗಳ ಮೊದಲು ರದ್ದು

ಹಮದಾಬಾದ್: ಜೂನಿಯರ್ ಕ್ಲರ್ಕ್‌ಗಳ ಪರೀಕ್ಷೆ ಬರೆಯಲು ತಯಾರಾಗಿ ಹೊರಟ್ಟಿದ್ದ ಉದ್ಯೋಗಾಕಾಂಕ್ಷಿಗಳಿಗೆ ಗುಜರಾತ್ ಸರ್ಕಾರ ಶಾಕ್ ನೀಡಿದ್ದು, ಪರೀಕ್ಷೆ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಪರೀಕ್ಷೆಯನ್ನು ರದ್ದುಗೊಳಿಸಿದೆ.

ಜೂನಿಯರ್ ಕ್ಲರ್ಕ್‌ಗಳ ನೇಮಕಾತಿಗಾಗಿ ಗುಜರಾತ್ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಯು ಭಾನುವಾರ ನಡೆಯಬೇಕಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಯಿಂದಾಗಿ ಭಾನುವಾರ ನಿಗದಿಯಾದ ಗಂಟೆಗಳ ಮೊದಲು ಪಂಚಾಯತ್ ಪರೀಕ್ಷಾ ಮಂಡಳಿ ಪರೀಕ್ಷೆ ರದ್ದುಗೊಳಿಸಿದೆ.

ಖಾಲಿಯಿರುವ 1,181 ಹುದ್ದೆಗಳ ಪರೀಕ್ಷೆಗೆ 9.5 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಾ ದ್ಯಂತ 2,995 ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆಯಬೇಕಿತ್ತು.

ಭಾನುವಾರ ಬೆಳಗ್ಗೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಪೊಲಿಸರು ಮಾಹಿತಿ ನೀಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಸುಳಿವಿನ ಆಧಾರದ ಮೇಲೆ, ಪೊಲೀಸರು ಶಂಕಿತ ನನ್ನು ಬಂಧಿಸಿ, ಪ್ರಶ್ನೆಪತ್ರಿಕೆ ಪ್ರತಿಯನ್ನು ವಶಪಡಿಸಿಕೊಂಡಿದ್ದಾರೆ.

ಜೂನಿಯರ್ ಕ್ಲರ್ಕ್ (ಆಡಳಿತ / ಲೆಕ್ಕಪತ್ರ) ಪರೀಕ್ಷೆಯನ್ನು ಜನವರಿ 29 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ವಿವಿಧ ಜಿಲ್ಲೆಗಳಲ್ಲಿ ನಡೆಸಬೇಕಾಗಿತ್ತು. ಅಭ್ಯರ್ಥಿಗಳಿಗೆ ಆಗಿರುವ ಅನಾನು ಕೂಲತೆಗೆ ಮಂಡಳಿ ವಿಷಾದ ವ್ಯಕ್ತಪಡಿಸಿದ್ದು, ಪರೀಕ್ಷಾ ಕೇಂದ್ರಗಳಿಗೆ ಹೋಗದಂತೆ ಸೂಚನೆ ನೀಡಿದೆ.

ಜೊತೆಗೆ ಶೀಘ್ರದಲ್ಲೇ ಪರೀಕ್ಷೆಯನ್ನು ನಡೆಸಲಾಗುವುದು, ಇದಕ್ಕಾಗಿ ಮಂಡಳಿಯು ಹೊಸ ದಿನಾಂಕವನ್ನು ಘೋಷಿಸುವುದಾಗಿ ತಿಳಿಸಿದೆ.