Sunday, 15th December 2024

ಖಾಸಗಿ ಆಸ್ಪತ್ರೆಯಲ್ಲಿ ಮಗು 2 ಮೂಗಿನೊಂದಿಗೆ ಜನನ

ಸಬರಕಂಠ(ಗುಜರಾತ್​): ಹಿಮ್ಮತ್​​ನಗರದ ಖಾಸಗಿ ಆಸ್ಪತ್ರೆಯಲ್ಲಿ 2 ಮೂಗಿನ ಮಗು ಜನಿಸಿದೆ. ಮುನ್ನೆಚ್ಚರಿಕೆಯಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸದ್ಯಕ್ಕೆ ಮಗು ಆರೋಗ್ಯವಾಗಿದ್ದು, ಕುಟುಂಬದವರಿಗೆ ಭರವಸೆ ಮೂಡಿದೆ. ವರದಿ ಪ್ರಕಾರ, ಪ್ರತಿ 8,000 ರಿಂದ 15,000 ಶಿಶು ಗಳಲ್ಲಿ ಒಂದು ಮಗು ಈ ರೀತಿ ಜನಿಸುತ್ತದೆ.

ಮಗುವನ್ನು ಪರಿಕ್ಷಿಸುತ್ತಿರುವ ವೈದ್ಯರುಸದ್ಯಕ್ಕೆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತದೆ. ಭವಿಷ್ಯದಲ್ಲಿ ಆಪರೇಷನ್ ಮೂಲಕ ಮೂಗನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಮಕ್ಕಳ ತಜ್ಞ ಡಾ.ಧವಲ್ ಪಟೇಲ್ ತಿಳಿಸಿದ್ದಾರೆ.

ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾದ ಕೂಡಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗು ತ್ತದೆ. ಇನ್ನು ಈ ರೀತಿ ಮಕ್ಕಳಲ್ಲಿ ಒಂದು ಅಂಗಕ್ಕಿಂತ ಹೆಚ್ಚು ಅಂಗವಿರಲು ಅನುವಂಶಿಕ ಕಾಯಿಲೆಗಳು ಕಾರಣವಾಗುತ್ತವೆ. ಇಂಥಹ ಪ್ರಕರಣಗಳನ್ನು ವಿವಿಧ ಚಿಕಿತ್ಸೆಗಳ ಮೂಲಕ ಸರಿಪಡಿಸ ಲಾಗುತ್ತದೆ. ಆದರೆ ಅದಕ್ಕೆ ಕುಟುಂಬದ ಸಂಪೂರ್ಣ ಒಪ್ಪಿಗೆ ಅತ್ಯಗತ್ಯ ಎಂದಿದ್ದಾರೆ.

ಮಾರ್ಚ್​ ತಿಂಗಳಿನಲ್ಲಿ ರಾಜಸ್ಥಾನದ ಚುರು ಪ್ರದೇಶದಲ್ಲಿ ನಾಲ್ಕು ಕೈ ಕಾಲುಗಳಿರುವ ವಿಚಿತ್ರ ಹೆಣ್ಣು ಮಗು ಜನಿಸಿತ್ತು. ಆದರೆ ಆ ಮಗು ಕೇವಲ 20 ನಿಮಿಷದಲ್ಲಿ ಸಾವನ್ನಪ್ಪಿದೆ. ಮಗುವಿನ ತಾಯಿ 19ವರ್ಷದ ಮಮತಾ ಕನ್ವರ್​ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರ ಸಲಹೆ ಮೇರೆಗೆ ಸೋನೋಗ್ರಫಿ ಮಾಡಲಾಯಿತು. ಸೋನೋಗ್ರಫಿ ವೇಳೆ ಮಹಿಳೆಯ ಹೊಟ್ಟೆಯಲ್ಲಿ ವಿಚಿತ್ರವಾದ ಮಗು ಇರುವುದು ಪತ್ತೆಯಾ ಗಿದೆ.