ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿದ್ದು, ಪಟ್ಟಿಯಲ್ಲಿ 47 ವರ್ಷದ ತಲ್ಹಾ ಸಯೀದ್ ಹೆಸರು ಸೇರಿದೆ. ತಲ್ಹಾ ಸಯೀದ್ ಎಲ್‌ಇಟಿಯ ಕ್ಲರಿಕ್ ವಿಭಾಗದ ಮುಖ್ಯಸ್ಥ.
ತಲ್ಹಾ ಸಯೀದ್ ‘ಭಾರತ ಮತ್ತು ಅಫ್ಗಾನಿಸ್ತಾನದಲ್ಲಿ ಎಲ್‌ಇಟಿಗೆ ನೇಮಕಾತಿ, ನಿಧಿ ಸಂಗ್ರಹ, ಯೋಜನೆ ಮತ್ತು ದಾಳಿಗಳನ್ನು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ’ ಎಂದು ಹೇಳಿದೆ.
‘ಹಫೀಜ್ ತಲ್ಹಾ ಸಯೀದ್ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ದೃಢಪಟ್ಟಿದ್ದು, ಆತನನ್ನು ಯುಎಪಿಎ ಕಾಯ್ದೆಯಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರವು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್, ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕರಾದ ಭಟ್ಕಳ್ ಸಹೋದರರಾದ ರಿಯಾಜ್ ಮತ್ತು ಇಕ್ಬಾಲ್ ಮತ್ತು ದಾವೂದ್ ಸಹಾಯಕ ಚೋಟಾ ಶಕೀಲ್ ಸೇರಿ 18 ಜನರನ್ನು ‘ಭಯೋತ್ಪಾದಕರು’ ಎಂದು ಗೊತ್ತುಪಡಿಸಿತ್ತು.