ಕೂದಲು ಸಂರಕ್ಷಣೆ ಮತ್ತು ಕೂದಲಿನ ಆರೋಗ್ಯ (Hair Protection And Hair Health) ಕಾಪಾಡಿಕೊಳ್ಳುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ(Hair Care). ಬಿಸಿಲು, ಧೂಳು, ಒಣ ಹವೆ, ಪೋಷಕಾಂಶದ ಕೊರತೆ (Nutrients deficiency) ಹೀಗೆ ಸಾಕಷ್ಟು ಅಂಶಗಳು ನಿಮ್ಮ ಕೂದಲಿನ ಹಾನಿಗೆ ಮುಖ್ಯ ಕಾರಣವಾಗಿವೆ. ಹಾಗಾಗಿ ನಿಮ್ಮ ಕೂದಲಿನ ಸಂರಕ್ಷಣೆಗೆ ನೀವು ಸಾಧ್ಯವಾದಷ್ಟು ನೈಸರ್ಗಿಕ ಪದಾರ್ಥಗಳನ್ನೇ ಬಳಸುವಂತೆ ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ. ಹಿಂದಿನ ಕಾಲದಿಂದಲೂ ಜನರು ಕೂದಲಿನ ಆರೈಕೆಗೆ ನೈಸರ್ಗಿಕ ವಸ್ತುಗಳನ್ನೇ ಬಳಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರಾಸಾಯನಿಕಯುಕ್ತ ಹೇರ್ ಪ್ರೊಡಕ್ಟ್ ಗಳು ಜನರನ್ನು ಸೆಳೆಯುತ್ತಿವೆ. ಇವುಗಳ ಬಳಕೆಯೂ ಸಹ ಕೂದಲಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು.
ಕೂದಲ ಆರೈಕೆಗೆ ಹೆಚ್ಚು ನೈಸರ್ಗಿಕ ಪದಾರ್ಥಗಳಿಂದ ಕಾಳಜಿ ವಹಿಸಿ ಪ್ರಾಚೀನ ಕಾಲದಲ್ಲಿ ಕೂದಲಿಗೆ ನೈಸರ್ಗಿಕ ವಸ್ತುಗಳ ಬಳಕೆ ಮಾಡಲಾಗುತ್ತಿತ್ತು. ಹಾಗಾಗಿ ಹಿಂದಿನ ಜನರ ಕೂದಲು ದಟ್ಟ ಮತ್ತು ಕಪ್ಪು, ಉದ್ದವಾಗಿರುತ್ತಿದ್ದವು. ಯಾವಾಗಲೂ ಯಾವುದೇ ಅಂಶಗಳನ್ನು ಫಾಲೋ ಮಾಡುವ ಮೊದಲು, ಸೌಂದರ್ಯವರ್ಧಕಗಳನ್ನು ಬಳಸುವ ಮೊದಲು ಆರೋಗ್ಯಕರ ಆಹಾರ ಸೇವನೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಇದನ್ನು ಆಯುರ್ವೇದವೂ ಸರಿಯೆಂದು ಹೇಳುತ್ತದೆ.
ಹೆಚ್ಚಿನ ಆಯುರ್ವೇದ ಪರಿಹಾರಗಳಲ್ಲಿ ಗಿಡಮೂಲಿಕೆಗಳನ್ನು ಬಳಕೆ ಮಾಡಲಾಗುತ್ತದೆ. ಇದು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಆದರೆ ಹೆಚ್ಚಿನ ಜನರು ರಾಸಾಯನಿಕಯುಕ್ತ ಪ್ರೊಡಕ್ಟ್‌ಗಳ ಬಳಕೆ ಹೆಚ್ಚು ಮಾಡುತ್ತಾರೆ. ಇದು ಕೂದಲನ್ನು ಹಾನಿ ಮತ್ತು ದುರ್ಬಲಗೊಳಿಸುತ್ತದೆ. ಹಾಗಾಗಿ ಕೂದಲಿಗೆ ನಿಜವಾಗಿಯೂ ಪ್ರಯೋಜನಕಾರಿಯಾಗುವ ವಸ್ತುಗಳನ್ನು ಬಳಸುವುದು ಮುಖ್ಯ.
ನಿಮ್ಮ ಆಹಾರದಲ್ಲಿ ಈ ಪದಾರ್ಥಗಳನ್ನು ತಪ್ಪದೇ ಸೇರಿಸಿ
ಮೊಟ್ಟೆ: ಆರೋಗ್ಯಕರ ಕೂದಲು ಬೆಳವಣಿಗೆಗೆ ಮೊಟ್ಟೆಯನ್ನು ತಿನ್ನಿ. ಇದು ಉತ್ತಮ ಆರೋಗ್ಯಕ್ಕೆ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಮೊಟ್ಟೆಯಲ್ಲಿ ಸತು, ಸೆಲೆನಿಯಮ್ ಜೊತೆಗೆ ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ಬಯೋಟಿನ್ ಅಂಶವಿದೆ. ಆಹಾರದಲ್ಲಿ ಪ್ರೋಟೀನ್ ಅನ್ನು ಸೇರಿಸುವುದು ಸಹ ಮುಖ್ಯ. ಇದು ಕೂದಲು ಕಿರುಚೀಲಗಳ ಆರೋಗ್ಯಕ್ಕೆ ಮುಖ್ಯ. ಪ್ರೋಟೀನ್ ಕೊರತೆಯು ಕೂದಲಿನ ಕಿರುಚೀಲಗಳನ್ನು ದುರ್ಬಲಗೊಳಿಸುತ್ತದೆ. ಕೂದಲಿನ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಬಯೋಟಿನ್ ಸಹ ಅಗತ್ಯವಿದೆ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿ ಫೋಲೇಟ್ ಜೊತೆಗೆ ಕಬ್ಬಿಣ, ವಿಟಮಿನ್ ಸಿ ಮತ್ತು ವಿಟಮಿನ್ ಎ ಪೋಷಕಾಂಶಗಳು ಸಮೃದ್ಧವಾಗಿವೆ. ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಬೇಕೇ ಬೇಕು. ವಿಟಮಿನ್ ಎ ಅನ್ನು ಕೂದಲಿನ ಬಲಕ್ಕೆ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಆಹಾರದಲ್ಲಿ ಸೇರಿಸಲು ಯಾವತ್ತೂ ಮರೆಯಬೇಡಿ. ಪಾಲಕ್ ಎಲೆಗಳ ಪೇಸ್ಟ್ ಅನ್ನು ಕೂದಲಿಗೆ ಬಳಸಬಹುದು.
ಬೀಟ್ರೂಟ್ ತಿನ್ನಿ: ಬೀಟ್ರೂಟ್ ತಿನ್ನುವುದರಿಂದ ಆರೋಗ್ಯ ಮತ್ತು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ ಆಗಿದೆ. ಬೀಟ್ರೂಟ್ ರಸದಿಂದ ತಲೆಗೆ ಮಸಾಜ್ ಮಾಡಿದರೆ ತಲೆಹೊಟ್ಟು, ನೆತ್ತಿಯ ತುರಿಕೆ ಮತ್ತು ಕೂದಲು ಉದುರುವಿಕೆ ಸಮಸ್ಯೆಗಳು ಹೋಗುತ್ತವೆ. ವಿಟಮಿನ್ ಬಿ 6, ವಿಟಮಿನ್ ಸಿ ಜೊತೆಗೆ ಪೊಟ್ಯಾಸಿಯಮ್ ಮತ್ತು ಕ್ಯಾರೊಟಿನಾಯ್ಡ್ಗಳು ಬೀಟ್ರೂಟ್ನಲ್ಲಿವೆ. ಬೀಟ್ರೂಟ್ ತಿನ್ನುವುದರಿಂದ ಕೂದಲಿನ ಸಮಸ್ಯೆಗಳ ಜೊತೆಗೆ ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.
ಬಾಳೆಹಣ್ಣು: ಬಾಳೆಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ. ಬಾಯಿ ಹುಣ್ಣು ಸಮಸ್ಯೆಯಿಂದ ಮಲಬದ್ಧತೆಯನ್ನು ಸಹ ಹೋಗಲಾಡಿಸುವವರೆಗೆ ಬಾಳೆಹಣ್ಣು ಪ್ರಯೋಜನಕಾರಿಯಾಗಿದೆ. ಇದಲ್ಲದೆ ಬಾಳೆಹಣ್ಣು ಕೂದಲಿಗೆ ರಾಮಬಾಣವಾಗಿದೆ. ಹೇರ್ ಮಾಸ್ಕ್ ಮಾಡಿದರೆ ತುಂಬಾ ಪರಿಣಾಮಕಾರಿ. ಇದು ಆಳವಾಗಿ ಕೂದಲನ್ನು ಪೋಷಿಸಿ, ಮೃದುಗೊಳಿಸಲು ಮತ್ತು ಸ್ಥಿತಿಗೆ ತರಲು ಸಹಾಯ ಮಾಡುತ್ತದೆ.
ಈ ಸುದ್ದಿಯನ್ನೂ ಓದಿ: Health Tips: ಅರಶಿನವನ್ನು ದಿನಕ್ಕೆ ಎಷ್ಟು ಸೇವಿಸಬಹುದು?