Thursday, 26th December 2024

Haryana Horror: ಹಾಡಹಗಲೇ ಎಲ್ಲರದುರೇ ಬಾಲಕನನ್ನು ಇರಿದು ಕೊಂದ ದುರುಳರು; ರಕ್ಷಣೆಗೆ ಎಷ್ಟೇ ಕೂಗಿದರೂ ನೆರವಿಗೆ ಬಾರದ ಜನ!

ಫರಿದಾಬಾದ್‌: ಹರಿಯಾಣದ(Haryana) ಫರಿದಾಬಾದ್‌ನಲ್ಲಿ(Faridabad) 11 ನೇ ತರಗತಿಯ ವಿದ್ಯಾರ್ಥಿಯನ್ನು(Class 11 Student) 10 ಜನರು ಜನ ನಿಬಿಡ ಮಾರ್ಕೆಟ್‌ನಲ್ಲಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ(Stabbed to Death) ಮಾಡಿರುವ ಆತಂಕಕಾರಿ ಘಟನೆ ಮಂಗಳವಾರ(ಡಿ.24) ವರದಿಯಾಗಿದೆ(Haryana Horror). ಇನ್ನು ಸಾರ್ವಜನಿಕವಾಗಿ ಇಂತಹ ಭೀಕರ ಘಟನೆ ನಡೆಯುತ್ತಿದ್ದರೂ ಯಾರೊಬ್ಬರೂ ಬಾಲಕನ ಸಹಾಯಕ್ಕೆ ಬಂದಿಲ್ಲ. ಇನ್ನು ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಮಂಗಳವಾರ ಫರಿದಾಬಾದ್‌ನಲ್ಲಿ 11ನೇ ತರಗತಿಯ ವಿದ್ಯಾರ್ಥಿಯನ್ನು 10 ಜನರ ಗುಂಪೊಂದು ಮಾರುಕಟ್ಟೆಯೊಂದರಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣವು ದಾಖಲಾಗುತ್ತಿದ್ದಂತೆ ಒಂದಷ್ಟು ಆಘಾತಕಾರಿ ವಿವರಗಳು ಹೊರಬಿದ್ದಿವೆ.

ಪೊಲೀಸರ ಪ್ರಕಾರ, ಹತ್ಯೆಗೆ ಒಳಗಾದ ವಿದ್ಯಾರ್ಥಿ ಮತ್ತು ಆತನ ಸಹೋದರಿ ಸಹಾಯಕ್ಕಾಗಿ ಜೋರಾಗಿ ಕಿರುಚಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ ಯಾರೊಬ್ಬರೂ ನೆರವಿಗೆ ಧಾವಿಸುವ ಧೈರ್ಯ ತೋರಿಲ್ಲ ಎನ್ನಲಾಗಿದೆ. ಆರೋಪಿಗಳು ಒಂದು ನಿಮಿಷದ ಅವಧಿಯಲ್ಲಿ ಆತನ ಹೊಟ್ಟೆ, ಎದೆ, ಬೆನ್ನು ಮತ್ತು ತೊಡೆಯ ಭಾಗಕ್ಕೆ ಹತ್ತಾರು ಬಾರಿ ಇರಿದು ಸ್ಥಳದಿಂದ ಕೂಡಲೇ ಪರಾರಿಯಾಗಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ 19 ರಿಂದ 21 ವರ್ಷದೊಳಗಿನ ಎಲ್ಲಾ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ

ಮಂಗಳವಾರ(ಡಿ.24) ಸಂಜೆ ಅನ್ಶುಲ್ ಕುಮಾರ್ ತನ್ನ ಸಹೋದರಿ ಅಂಜಲಿಯೊಂದಿಗೆ ಮಾರುಕಟ್ಟೆಯಲ್ಲಿರುವ ಸಿಹಿತಿಂಡಿ ಅಂಗಡಿಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿಯಿದೆ. ಅಂಜಲಿ ತಿಂಡಿಗಳನ್ನು ಖರೀದಿಸುತ್ತಿರುವ ವೇಳೆ ಅನ್ಶುಲ್ ತನ್ನ ಸ್ನೇಹಿತರೊಂದಿಗೆ ಮಾತನಾಡಿದ್ದಾನೆ. ಆರೋಪಿಗಳು ಚಾಕು ಮತ್ತು ರಾಡ್‌ಗಳನ್ನು ಹಿಡಿದು ಅವನನ್ನು ಹತ್ಯೆಗೈಯ್ಯಲು ಸಂಚು ರೂಪಿಸಿ ನಿಂತಿದ್ದರು. ತಕ್ಷಣವೇ ಸಿಕ್ಕ ಸಿಕ್ಕಲ್ಲಿ ಚಾಕುವಿನಿಂದ ಇರಿದಿದ್ದು,ಅನ್ಶುಲ್‌ ಮತ್ತು ಅಂಜಲಿ ಸಹಾಯಕ್ಕಾಗಿ ಕಿರುಚಿದ್ದಾರೆ. ಆದರೆ ಸಹಾಯ ಮಾಡಲು ಯಾರೂ ಮುಂದಾಗಿಲ್ಲ. ಆಘಾತಕಾರಿ ಘಟನೆಯನ್ನು ನೋಡಿ ಜನರು ಸಾಕಷ್ಟು ಹೆದರಿದ್ದಾರೆ.

ಪೊಲೀಸರ ಪ್ರಕಾರ,ಅನ್ಶುಲ್ ಆರೋಪಿಗಳೊಂದಿಗೆ ವಿವಾದವನ್ನು ಹೊಂದಿದ್ದರು. ಅವರು ಮಾದಕವಸ್ತು ಮಾರಾಟ ಮಾಡುತ್ತಿದ್ದರು. ಹಲವು ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಹೀಗಾಗಿ ಅನ್ಶುಲ್‌ ಮತ್ತು ಆರೋಪಿಗಳ ನಡುವೆ ಸಾಕಷ್ಟು ಬಾರಿ ಜಗಳಗಳಾಗಿದ್ದವು. ಘರ್ಷಣೆ ಮಿತಿ ಮೀರಿದ ಪರಿಣಾಮವಾಗಿ ಅನ್ಶುಲ್ ನನ್ನು 14 ಬಾರಿ ಇರಿದು ಕೊಂದಿದ್ದಾರೆ. ಹಲ್ಲೆಯನ್ನು ಕಣ್ಣಾರೆ ಕಂಡ ಅಂಜಲಿ ತನ್ನ ಸಹೋದರನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಸ್ಥಿತಿ ತೀರಾ ಗಂಭೀರವಾಗಿದ್ದ ಕಾರಣ ಅನ್ಶುಲ್ ಬುಧವಾರ(ಡಿ.25) ಮೃತಪಟ್ಟಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಆರೋಪಿಗಳಾದ ಹರ್ಷ್ ಮಾಥುರ್, ರೋಹಿತ್ ಧಾಮ, ಹಿಮಾಂಶು ಕುಮಾರ್, ಕರ್ಣ್, ಮೊಹಮ್ಮದ್ ಸಾಜಿದ್, ರೂಪೇಶ್, ಕರಣ್ ಕೋಲಿ, ವಾಸು, ದೀಪಕ್ ಮತ್ತು ಜತಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ಆರೋಪಿಗಳು ಫರಿದಾಬಾದ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ:Viral News: ಸರ್ಕಾರದ ಕೋಟಿ ಕೋಟಿ ದುಡ್ಡು ಲೂಟಿ; ಗರ್ಲ್‌ಫ್ರೆಂಡ್‌ಗೆ BMW, 4BHK ಫ್ಲ್ಯಾಟ್‌ ಗಿಫ್ಟ್‌! ಹಗರಣ ಬಯಲಾಗ್ತಿದ್ದಂತೆ ಕಿಲಾಡಿ ಎಸ್ಕೇಪ್‌