Thursday, 21st November 2024

ಹರಿಯಾಣ ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಚಂಡೀಗಢ: ರಿಯಾಣ ಕ್ರೀಡಾ ಸಚಿವ ಸಂsandeepದೀಪ್​ ಸಿಂಗ್​ ವಿರುದ್ಧ ಚಂಡೀಗಢ ಪೊಲೀಸರು ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್​ ಕೇಸ್​ ದಾಖಲಿಸಿದ್ದಾರೆ.

ಜ್ಯೂನಿಯರ್ ಅಥ್ಲೆಟಿಕ್ಸ್​ ಮಹಿಳಾ ಕೋಚ್​ ವೊಬ್ಬರು ಸಚಿವರ ವಿರುದ್ಧ ಪೊಲೀಸರಿಗೆ ದೂರು ನೀಡಿ, ‘ನಾನು ಕ್ರೀಡಾ ಸಚಿವರ ಚಂಡಿಗಢ್​​ನಲ್ಲಿರುವ ನಿವಾಸಕ್ಕೆ ಕಾರ್ಯ ನಿಮಿತ್ತ ಹೋಗಿದ್ದಾಗ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿ ದ್ದಾರೆ.

ಕ್ರೀಡಾ ಸಚಿವ ಸಂದೀಪ್​ ಸಿಂಗ್​ ಅವರು ಕುರುಕ್ಷೇತ್ರದ ಪೆಹೋವಾ ವಿಧಾನಸಭಾ ಕ್ಷೇತ್ರ ದಿಂದ ಗೆದ್ದವರು. ಹಾಕಿ ಆಟಗಾರ ರಾಗಿದ್ದು, 2004-2012ರವರೆಗೆ ಭಾರತೀಯ ಹಾಕಿ ತಂಡ ದಲ್ಲಿ ಆಟವಾಡಿದ್ದಾರೆ. 2019ರಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿ, ಹರಿ ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಕ್ರೀಡಾ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿ ದ್ದರು.

ಇದೀಗ ಈ ಮಹಿಳಾ ಕೋಚ್​​ ಕ್ರೀಡಾ ಸಚಿವರ ವಿರುದ್ಧ ಗಂಭೀರ ಆರೋಪವನ್ನೇ ಮಾಡಿದ್ದಾರೆ. ಮಹಿಳೆ 2016ರಲ್ಲಿ ನಡೆದ ರಿಯೊ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಿದ್ದರು. ಬಳಿಕ ಇದೇ ವರ್ಷ ಸೆಪ್ಟೆಂಬರ್​ನಲ್ಲಿ ಕೇಂದ್ರ ಸರ್ಕಾರದ ಅತ್ಯುತ್ತಮ ಕ್ರೀಡಾಪಟು ಯೋಜನೆಯಡಿ ಜ್ಯೂನಿಯರ್​ ಕೋಚ್​ ಆಗಿ ನೇಮಕಗೊಂಡಿದ್ದರು.

ಈ ಮಧ್ಯೆ ಹರಿಯಾಣ ಕ್ರೀಡಾ ಸಚಿವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.