Friday, 22nd November 2024

Hassan Nasrallah: ನಸ್ರಲ್ಲಾ ಸಾವಿಗೆ ಸಿರಿಯಾದಲ್ಲಿ ಸಂಭ್ರಮಾಚರಣೆ; ದೂರದ ಜಮ್ಮು-ಕಾಶ್ಮೀರದಲ್ಲೇಕೆ ಶೋಕಾಚರಣೆ?

Israel strikes

ಶ್ರೀನಗರ: ಇಸ್ರೇಲ್‌(Israel Airstrike) ವೈಮಾನಿಕ ದಾಳಿಗೆ ಹೆಜ್ಬುಲ್ಲಾ(Hezbollah) ಮುಖ್ಯಸ್ಥ ಹಸನ್‌ ನಸ್ರಲ್ಲಾ(Hassan Nasrallah) ಹತ್ಯೆಗೆ ಜಮ್ಮು-ಕಾಶ್ಮೀರ(Jammu-Kashmir)ದಲ್ಲಿ ಎರಡು ದಿನಗಳಿಂದ ಪ್ರತಿಭಟನೆ ನಡೆಯುತ್ತಲ್ಲೇ ಇದೆ. ಸಾಲದೆನ್ನುವಂತೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ(Mehbooba Mufti) ಸೇರಿದಂತೆ ಹಲವು ರಾಜಕೀಯ ಮುಖಂಡರು ಚುನಾವಣಾ ಪ್ರಚಾರ ಕಾರ್ಯ ಕೈಬಿಟ್ಟು ಉಗ್ರನ ಸಾವಿಗೆ ಕಂಬನಿ ಮಿಡಿದಿದ್ದಾರೆ. ಆದರೆ ಲೆಬನಾನ್‌ನ ಸಮೀಪದ ರಾಷ್ಟ್ರ ಸಿರಿಯಾದಲ್ಲಿ ಮಾತ್ರ ನಸ್ರಲ್ಲಾ ಹತ್ಯೆಗೆ ಸ‍ಂಭ್ರಮಾಚರಣೆ ಮಾಡಲಾಗಿದೆ.

ನಸ್ರಲ್ಲಾನ ದಬ್ಬಾಳಿಕೆಯಿಂದ ನಲುಗಿ ಹೋಗಿರುವ ಸಿರಿಯಾದ ಆತನ ಹತ್ಯೆಗೆ ಅಲ್ಲಿನ ಜನ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹೆಜ್ಬುಲ್ಲಾ ಉಗ್ರರು ಸಿರಿಯಾದಲ್ಲಿ ಅನೇಕ ಅಮಾಯಕರ ಜನರನ್ನು ಬಲಿ ಪಡೆದಿದ್ದಾರೆ. ಹೀಗಾಗಿ ಇದೀಗ ನಸ್ರಲ್ಲಾನ ಹತ್ಯೆಯಿಂದ ಸಿರಿಯಾ ನಿರಾಳವಾಗಿದೆ. ಸಿರಿಯಾದ ಮುಸ್ಲಿಮರ ಸಂಭ್ರಮಾಚರಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಅಗುತ್ತಿದೆ.

ಇನ್ನು ನಸ್ರಲ್ಲಾ ಹತ್ಯೆಗೆ ಪಕ್ಕದ ರಾಷ್ಟ್ರ ಸಿರಿಯಾ ಸಂಭ್ರಮಾಚರಿಸುತ್ತಿದ್ದರೆ ಅದೆಷ್ಟೋ ಮೈಲು ದೂರದಲ್ಲಿರುವ ಜಮ್ಮು-ಕಾಶ್ಮೀರದಲ್ಲೇಕೆ ಜನ ಆತನನ್ನು ಹುತಾತ್ಮನಂತೆ ಬಿಂಬಿಸುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಕೇವಲ ಸತ್ತವರನು ಮುಸ್ಲಿಂ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಿ ಆಕ್ರೋಸ ವ್ಯಕ್ತಪಡಿಸುತ್ತಿದ್ದಾರೆಯೇ? ಹಾಗಿದ್ದರೆ ಸಿರಿಯಾದಲ್ಲಿರುವವರೂ ಮುಸ್ಲಿಮರೇ.. ಅವರೇಕೆ ಪ್ರತಿಭಟಿಸುತ್ತಿಲ್ಲ, ಕಂಬನಿ ಮಿಡಿಯುತ್ತಿಲ್ಲ? ಆದರೆ ಅವರಿಗೆ ನಸ್ರಲ್ಲಾನ ನಿಜವಾದ ಮುಖ ಏನೆಂಬುದು ತಿಳಿದಿದೆ. ಅದು ನಮ್ಮ ಭಾರತದ ಮುಸ್ಲಿಮರಿಗೆ ತಿಳಿದಿಲ್ಲವೆಂದೆನಿಸುತ್ತಿದೆ.

ಈ ಸುದ್ದಿಯನ್ನೂ ಓದಿ: Israel Airstrike: ನಸ್ರಲ್ಲಾ ಹತ್ಯೆಯಿಂದ ದಿಕ್ಕೆಟ್ಟಿರುವ ಹೆಜ್ಬುಲ್ಲಾಗಳಿಗೆ ಶಾಕ್‌ ಮೇಲೆ ಶಾಕ್‌- ಮತ್ತೆ ಏರ್‌ಸ್ಟ್ರೈಕ್‌; 100ಕ್ಕೂ ಅಧಿಕ ಮಂದಿ ಬಲಿ