ನವದೆಹಲಿ: ವೆಬ್ ಪೋರ್ಟಲ್ಗಳು ಹಾಗೂ ಯುಟ್ಯೂಬ್ನಂತಹ ಆನ್ಲೈನ್ ಚಾನೆಲ್ಗಳಲ್ಲಿ ಸುಳ್ಳು ಸುದ್ದಿಗಳು ಬಿತ್ತರವಾಗುವುದಕ್ಕೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಕಳೆದ ವರ್ಷ ದೇಶದಲ್ಲಿ ಕರೋನಾ ಸೋಂಕು ಪಸರಿಸಲು ತಬ್ಲಿಘಿ ಜಮಾತ್ ಕಾರಣ ಎಂದು ವರದಿ ಬಿತ್ತರಿಸಿದ್ದ ಮಾಧ್ಯಮಗಳ ವಿರುದ್ಧ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತ್ತು.
ನ್ಯಾ.ರಮಣ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬಳಿ, ಮಾಧ್ಯಮಗಳ ವರ್ಗವೊಂದು ಎಲ್ಲಾ ಸುದ್ದಿಗಳಿಗೆ ಕೋಮು ಬಣ್ಣ ಹಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಯತ್ನಿಸಿದ್ದೀರಾ ಎಂದು ಪ್ರಶ್ನಿಸಿದೆ.
ಮೆಹ್ತಾ ಉತ್ತರಿಸಿ, ಕೇಂದ್ರ ಸರ್ಕಾರವು ಈಗಾಗಲೇ ಹೊಸ ಐಟಿ ನಿಯಮ ಜಾರಿಗೆ ತಂದಿದೆ. ಹೈಕೋರ್ಟ್ಗಳಲ್ಲಿ ಹೊಸ ಐಟಿ ನಿಯಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದ ಎಂದರು. ಇದಕ್ಕೆ ಸಿಜೆಐ ಈ ವಿವರವಾಗಿ ಚರ್ಚೆಯ ಅಗತ್ಯವಿದೆ ಎಂದಿದೆ. ಜಮಿಯತ್ ಉಲೇಮಾ ಇ ಹಿಂದ್ ಹಾಗೂ ಪೀಸ್ ಪಾರ್ಟಿ ಆಫ್ ಇಂಡಿಯಾ ಸುಪ್ರಿಂಕೋರ್ಟ್’ ನಲ್ಲಿ ಅರ್ಜಿ ಸಲ್ಲಿಸಿದ್ದು ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಕೋಮುವಾದ ಹೆಚ್ಚಲು ಕಾರಣವಾಗುತ್ತಿರುವ ಮಾಧ್ಯಮದ ಒಂದು ವರ್ಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ವೆಬ್ ಪೋರ್ಟಲ್ಗಳು ಹಾಗೂ ಯುಟ್ಯೂಬ್ ಚಾನೆಲ್ಗಳಲ್ಲಿ ಯಾರು ಬೇಕಿದ್ದರೂ ಚಾನೆಲ್ ತೆರೆಯಬಹುದು. ಹಾಗೂ ಸುಳ್ಳು ಸುದ್ದಿಗಳು ಮುಕ್ತವಾಗಿ ಕಾಣ ಸಿಗುತ್ತಿದೆ ಎಂದು ನ್ಯಾ. ರಮಣ ಕಳವಳ ವ್ಯಕ್ತಪಡಿಸಿದ್ದಾರೆ.
ವೆಬ್ ಪೋರ್ಟಲ್ ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ಆಡಳಿತ ಮಂಡಳಿಯೇ ಇಲ್ಲ. ಮನಸ್ಸಿಗೆ ಬಂದ ಸುದ್ದಿಗಳನ್ನು ಬಿತ್ತರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಯುಟ್ಯೂಬ್ ಚಾನೆಲ್ಗಳನ್ನು ಯಾರೂ ಬೇಕಾದರೂ ತೆರೆಯಬಹುದಾಗಿದೆ. ಯುಟ್ಯೂಬ್ಗಳನ್ನು ತೆರೆದರೆ ಸಾಕು ಸುಳ್ಳು ಸುದ್ದಿಗಳು ಮುಕ್ತವಾಗಿ ಕಾಣಸಿಗುತ್ತದೆ. ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲೇಬೇಕಿದೆ ಎಂದು ಸಿಜೆಐ ಹೇಳಿದರು.