Saturday, 23rd November 2024

ಹವಾಲಾ ವ್ಯವಹಾರ ಪ್ರಕರಣ: ನವದೆಹಲಿಯ ವಿವಿಧೆಡೆ ದಾಳಿ

ನವದೆಹಲಿ: ದೆಹಲಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ನಡೆಸಲಾಗುತ್ತಿರುವ ಹವಾಲಾ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಸೋಮವಾರ ರಾಜಧಾನಿ ವಿವಿಧೆಡೆ ದಾಳಿ ನಡೆಸಿದೆ.

ಕಳೆದ ಮೇ 30 ರಂದು ಮನಿ ಲಾಂಡರಿಂಗ್ ತಡೆ ಕಾಯ್ದೆಯ ಕ್ರಿಮಿನಲ್ ಪ್ರಕರಣದಡಿ ಯಲ್ಲಿ ಬಂಧಿಸಲಾಗಿದ್ದು, ಜೂ.9 ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ. ಜೈನ್ ಅವರ ವಿಚಾರಣೆ ನಂತರ ಕೆಲವು ಹೊಸ ಸಾಕ್ಷ್ಯಗಳನ್ನು ಕಲೆಹಾಕಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಕೆಲವು ಹವಾಲಾ ದಂಧೆ ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಜೈನ್ ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಯಾವುದೇ ಖಾತೆ ಇಲ್ಲದೆ ಸಚಿವರಾಗಿದ್ದಾರೆ. ಜೈನ್ ಅವರ 6ಕ್ಕೂ ಹೆಚ್ಚು ಖಾತೆಗಳನ್ನು ಜೂ.2ರಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ವರ್ಗಾಯಿಸಲಾಯಿತು.

ದೆಹಲಿಯ ಸಚಿವ ಅರವಿಂದ್ ಕೇಜ್ರಿವಾಲ್ ಅವರು ಜೈನ್ ಅವರನ್ನು ಪ್ರಾಮಾಣಿಕ ಮತ್ತು ದೇಶಭಕ್ತ ವ್ಯಕ್ತಿ ಎಂದು ಸಮರ್ಥಿಸಿ ಕೊಂಡಿದ್ದಾರೆ ಮತ್ತು ಅವರು ಸುಳ್ಳು ಪ್ರಕರಣದಲ್ಲಿ ಸಿಲುಕಿದ್ದಾರೆ ಮತ್ತು ಇಡಿ ತನಿಖೆಯ ನಂತರ ಸಚಿವರು ಹೊರಬರುತ್ತಾರೆ ಎಂದು ಆಶಿಸಿದ್ದಾರೆ.

ಏಪ್ರಿಲ್‍ನಲ್ಲಿ ತನಿಖೆಯ ಭಾಗವಾಗಿ ಇಡಿ ಜೈನ್ ಅವರ ಕುಟುಂಬದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮತ್ತು ಅವರ ಲಾಭದಾಯಕವಾಗಿ ಒಡೆತನದ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳನ್ನು ಜಪ್ತಿ ಮಾಡಿತ್ತು.