Thursday, 12th December 2024

ಎಚ್​.ಡಿ.ಎಫ್‌.ಸಿ.: ಕೋಝಿಕ್ಕೋಡ್​ನಲ್ಲಿ ಮೊದಲ ಮಹಿಳಾ ಶಾಖೆ

ಕೋಝಿಕ್ಕೋಡ್: ಖಾಸಗಿ ವಲಯದ ಬ್ಯಾಂಕ್​ ಎಚ್​.ಡಿ.ಎಫ್‌.ಸಿ. ತನ್ನ ಮೊದಲ ಮಹಿಳಾ ಶಾಖೆಯನ್ನು ಕೇರಳದ ಕೋಝಿಕ್ಕೋಡ್​ನಲ್ಲಿ ತೆರೆದಿದೆ.

ಜಿಲ್ಲೆಯ ವ್ಯಾಪಾರಿ ಕೇಂದ್ರ ಚೆರೂಟ್ಟಿ ರಸ್ತೆಯಲ್ಲಿರುವ ಶಾಖೆಯಲ್ಲಿ ಎಲ್ಲಾ ಸಿಬ್ಬಂದಿ ಮಹಿಳೆಯರೇ ಇರಲಿದ್ದಾರೆ. ಮಹಾನಗರ ಪಾಲಿಕೆ ಮೇಯರ್​ ಬೀನಾ ಫಿಲಿಪ್​ ಅವರು ಶಾಖೆಯನ್ನು ಉದ್ಘಾಟಿಸಿದರು.

ಮಾರ್ಚ್​ 31, 2022 ರಂತೆ ಮಹಿಳೆ ಉದ್ಯೋಗಿಗಳು ಶೇಕಡಾ 21.7 ರಷ್ಟಿದ್ದಾರೆ ಮತ್ತು 2025ರ ವೇಳೆಗೆ ಇದನ್ನು ಶೇಕಡಾ 25 ಕ್ಕೆ ಹೆಚ್ಚಿಸುವ ಗುರಿ ಇದೆ ಎಂದು ಬ್ಯಾಂಕ್​ ಹೇಳಿಕೆ ತಿಳಿಸಿದೆ.

ದಕ್ಷಿಣ (ತಮಿಳುನಾಡು, ಪುದುಚೇರಿ ಮತ್ತು ಕೇರಳ) ಶಾಖೆಯ ಬ್ಯಾಂಕಿಂಗ್​ ಹೆಡ್​ ಸಂಜೀವ್​ ಕುಮಾರ್​, ಮಹಿಳೆಯರೇ ಕರ್ತವ್ಯ ನಿರ್ವಹಿಸುವ ಶಾಖೆಯನ್ನು ತೆರೆಯುವುದು ಬ್ಯಾಂಕಿನ ಲಿಂಗ ಮತ್ತು ವೈವಿಧ್ಯತೆಯ ಉಪಕ್ರಮಗಳನ್ನು ಮುಂದಕ್ಕೆ ತೆಗೆದು ಕೊಂಡು ಹೋಗುವ ಪ್ರಯತ್ನಗಳಿಗೆ ಮತ್ತೊಂದು ಉದಾಹರಣೆಯಾಗಿದೆ ಎಂದಿದ್ದಾರೆ.

ಕರ್ನಾಟಕ ಬ್ಯಾಂಕ್​, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್​ ಬಹಳ ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಇಂತಹ ಪ್ರಯತ್ನ ಮಾಡಿವೆ.