Thursday, 12th December 2024

ಲಕ್ಷದ್ವೀಪದಲ್ಲಿ ಎಚ್‌ಡಿಎಫ್‌ಸಿ ಮೊದಲ ಶಾಖೆ ಆರಂಭ

ಮುಂಬೈ: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ಲಕ್ಷದ್ವೀಪದ ಕವರಟ್ಟಿಯಲ್ಲಿ ಬುಧವಾರ ತನ್ನ ಮೊದಲ ಶಾಖೆ ತೆರೆದಿದೆ.

ಈ ಮೂಲಕ ಲಕ್ಷದ್ವೀಪದಲ್ಲಿ ಶಾಖೆ ತೆರೆದ ಮೊದಲ ಖಾಸಗಿ ಬ್ಯಾಂಕ್‌ ಎನಿಸಿಕೊಂಡಿದೆ. ‘ಜನರು ಎಲ್ಲಿರುತ್ತಾರೋ ಅಲ್ಲಿಯೇ ಸೇವೆಯನ್ನು ಒದಗಿಸಬೇಕು ಎನ್ನುವುದು ನಮ್ಮ ಬ್ಯಾಂಕ್‌ನ ಉದ್ದೇಶ. ಲಕ್ಷದ್ವೀಪದಲ್ಲಿರುವ ವ್ಯಕ್ತಿಗಳಿಗೆ, ಕುಟುಂಬಗಳಿಗೆ ಹಾಗೂ ಉದ್ಯಮದಾರರಿಗೆ ಸೇವೆಯನ್ನು ನೀಡಲು ಉತ್ಸುಕರಾಗಿದ್ದೇವೆ’ ಎಂದು ಬ್ಯಾಂಕ್‌ನ ಮುಖ್ಯಸ್ಥ ಎಸ್‌. ಸಂಪತ್‌ಕುಮಾರ್‌ ತಿಳಿಸಿದ್ದಾರೆ.

ಭಾರತೀಯ ನೌಕಾಪಡೆಯ ಕಮಾಂಡಿಂಗ್‌ ಅಧಿಕಾರಿ ಕ್ಯಾಪ್ಟನ್‌ ಲವಕೇಶ್‌ ಅವರು ಲಕ್ಷದ್ವೀಪದಲ್ಲಿ ಕಾರ್ಯಾರಂಭ ಮಾಡಿದ ಎಚ್‌ಡಿಎಫ್‌ಸಿಯ ಮೊದಲ ಶಾಖೆಗೆ ಚಾಲನೆ ನೀಡಿದರು.