Tuesday, 7th January 2025

Helicopter Crash : ಗುಜರಾತ್‌ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಮೂವರು ಸಿಬ್ಬಂದಿ ಸಾವು

Helicopter Crash

ಗಾಂಧಿನಗರ: ಭಾರತೀಯ ಕೋಸ್ಟ್ ಗಾರ್ಡ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಧ್ರುವ್ (Dhruv Helicopter) ಭಾನುವಾರದಂದು ಗುಜರಾತ್‌ನ (Gujarat) ಪೋರಬಂದರ್‌ನಲ್ಲಿ ತರಬೇತಿಯ ಸಮಯದಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಪೈಲೆಟ್‌ ಸೇರಿ ಮೂವರು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್‌ ತರಬೇತಿ ವೇಳೆ ಪತನಗೊಂಡಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸಿಬ್ಬಂದಿಗಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪತನಗೊಳ್ಳುತ್ತಿದ್ದಂತೆ ಹೆಲಿಕಾಪ್ಟರ್‌ನಿಂದ ಜಿಗಿದ ಮತ್ತೊಬ್ಬ ಸಿಬ್ಬಂದಿ ಕೂಡ ಮೃತಪಟ್ಟಿದ್ದಾರೆ ಎಂದು ಪೋರಬಂದರಿನ ಪೊಲೀಸರು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ಪತನಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕಳೆದ ವರ್ಷವೂ ನಡೆದಿತ್ತು ಘಟನೆ

ಸೆಪ್ಟೆಂಬರ್‌ನಲ್ಲಿ, ಧ್ರುವ್ ಸುಧಾರಿತ ಲಘು ಹೆಲಿಕಾಪ್ಟರ್ (ALH Mk-III) ಗುಜರಾತಿನ ಪೋರಬಂದರ್ ಬಳಿ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿತ್ತು. ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಕೋಸ್ಟ್ ಗಾರ್ಡ್ ಸಿಬ್ಬಂದಿಗಳಲ್ಲಿ ಮೂವರು ಮೃತಪಟ್ಟಿದ್ದರೆ, ಒಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಸೆಪ್ಟೆಂಬರ್​ 2ರಂದು ನೌಕಾಪಡೆ ಎಎಲ್​ಎಚ್​ ಹೆಲಿಕಾಪ್ಟರ್​​ ಮೂಲಕ ಪೋರ್‌ಬಂದರ್‌ನ ಹರಿ ಲೀಲಾ ಮೋಟಾರ್ ಟ್ಯಾಂಕರ್‌ನಿಂದ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ಮುಂದಾಗಿತ್ತು. ಈ ವೇಳೆ ಸಮುದ್ರದಲ್ಲಿ ತುರ್ತು ಲ್ಯಾಂಡಿಂಗ್​ ಮಾಡುತ್ತಿದ್ದಾಗ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ : Indian Army: ಭಾರತೀಯ ಸೇನೆ ತಾಂತ್ರಿಕ ಪ್ರವೇಶ ಯೋಜನೆಗೆ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *