Sunday, 15th December 2024

75ನೇ ಸ್ವಾತಂತ್ರ್ಯ ದಿನಾಚರಣೆ: ದೆಹಲಿಯಲ್ಲಿ ಭಾರಿ ಭದ್ರತೆ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಆಗಸ್ಟ್ 15ರಂದು ರಾಜಧಾನಿ ದೆಹಲಿಯಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.

ರಾಜಧಾನಿಯಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು, ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಪ್ರತಿಭಟಿಸಲು ರೈತರು ಎಂಟು ತಿಂಗಳಿನಿಂದ ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ ದೆಹಲಿ-ಗಡಿಗಳು ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ.

ಕೆಂಪು ಕೋಟೆಯಲ್ಲಿ ಬಹು-ಹಂತದ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳು ಸೇರಿದಂತೆ ಗಡಿ ಪ್ರದೇಶಗಳು ಸೇರಿದಂತೆ ಇನ್ನಿತರೆ ಯಾವುದೇ ಪ್ರದೇಶಗಳಲ್ಲೂ ಅಹಿತಕರ ಘಟನೆಗಳು ನಡೆಯದಂತೆ ಅವುಗಳನ್ನು ತಡೆಯಲು ನಗರದಾದ್ಯಂತದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಗಳ ನಿಯೋಜನೆಗಳೊಂದಿಗೆ ಬಹು-ಹಂತದ ಭದ್ರತಾ ವ್ಯವಸ್ಥೆಗಳು ಸಹ ಈಗಾಗಲೇ ನಿಯೋಜನೆ ಗೊಂಡಿವೆ.

ಪ್ಯಾರಾ-ಗ್ಲೈಡರ್‌ಗಳು, ಪ್ಯಾರಾ-ಮೋಟಾರ್‌ ಗಳು, ಹ್ಯಾಂಗ್ ಗ್ಲೈಡರ್‌ಗಳು, ಯುಎವಿಗಳು, ಮೈಕ್ರೋ ಲೈಟ್ ಏರ್‌ಕ್ರಾಫ್ಟ್‌ಗಳು, ರಿಮೋಟ್ ಪೈಲಟ್ ವಿಮಾನ ಗಳು, ಹಾಟ್ ಏರ್ ಬಲೂನ್‌ಗಳು, ಸಣ್ಣ ಗಾತ್ರದ ವಿಮಾನಗಳು, ಕ್ವಾಡ್‌ಕಾಪ್ಟರ್‌ಗಳು ಅಥವಾ ವಿಮಾನದಿಂದ ಪ್ಯಾರಾ-ಜಂಪಿಂಗ್ ಮುಂತಾದ ವೈಮಾನಿಕ ಉಪಕರಣಗಳ ಹಾರಾಟವನ್ನು ಆಗಸ್ಟ್ 16 ರವರೆಗೆ ನಿಷೇಧಿಸಲಾಗಿದೆ.

ದೆಹಲಿಯ ಟ್ರಾಫಿಕ್ ಪೋಲಿಸರು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ನಗರಾದ್ಯಂತ ವಾಹನಗಳ ಸುರಕ್ಷಿತ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ. ಇದಕ್ಕಾಗಿ ಅಂದು ಹೆಚ್ಚುವರಿ ಸಿಬ್ಬಂದಿಗಳನ್ನು ಕೂಡ ನಿಯೋಜಿಸಲಾಗಿದೆ.