Saturday, 4th January 2025

Himachal Horror: ರಕ್ಷಕರಾ ಇಲ್ಲ ಇವ್ರು ಭಕ್ಷಕರಾ? ಮದ್ಯ, ಊಟ ಇಲ್ಲಎಂದ ರೆಸಾರ್ಟ್‌ ಮ್ಯಾನೇಜರ್‌ನನ್ನೇ ಥಳಿಸಿ ಕೊಂದ ಪೊಲೀಸರು !

Himachal Horror

ಶಿಮ್ಲಾ: ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಹಿಮಾಚಲ ಪ್ರದೇಶ (Himachal Pradesh) ಆಘಾತಕಾರಿ ಘಟನೆ ಒಂದು ನಡೆದಿದ್ದು, ಪೊಲೀಸರೇ ಕೊಲೆ ಮಾಡಿ ಜೈಲು ಪಾಲಾಗಿದ್ದಾರೆ. ಡಾಲ್‌ಹೌಸಿ ಬಳಿಯ ಬನಿಖೇತ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ರೆಸಾರ್ಟ್ ಮ್ಯಾನೇಜರ್‌ನನ್ನು ಕೊಲೆ ಮಾಡಿ ಅಲ್ಲಿರುವ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಪೊಲೀಸರನ್ನು ಹಿಮಾಚಲ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. (Himachal Horror)

ಮಂಗಳವಾರ ತಡರಾತ್ರಿ ಮೂವರು ಪೊಲೀಸರು ಮದ್ಯ ಮತ್ತು ಆಹಾರಕ್ಕಾಗಿ ಒತ್ತಾಯಿಸಿ ರೆಸಾರ್ಟ್‌ಗೆ ಬಂದಾಗ ಈ ಘಟನೆ ಸಂಭವಿಸಿದೆ. ಹೊಸ ವರ್ಷದ ಸಂಭ್ರಮಾಚರಣೆಯ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್‌ ಪೇದೆಗಳು ಬನಿಖೇತ್‌ನಲ್ಲಿರುವ ಖಾಸಗಿ ರೆಸಾರ್ಟ್‌ಗೆ ತೆರಳಿದ್ದಾರೆ. ಅದಾಗಲೇ ಸಾಕಷ್ಟು ಸಮಯವಾಗಿದ್ದರಿಂದ ರೆಸಾರ್ಟ್‌ ಸಿಬ್ಬಂದಿ ಸಚಿನ್‌ ಊಟ ಹಾಗೂ ಮದ್ಯವನ್ನು ಕೊಡಲು ನಿರಾಕರಿಸಿದ್ದಾನೆ. ಅದಕ್ಕೆ ಕ್ಯಾತೆ ತೆಗೆದ ಅವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ರೆಸಾರ್ಟ್‌ನ ಜನರಲ್ ಮ್ಯಾನೇಜರ್ ರಾಜಿಂದರ್ ಮಧ್ಯಸ್ಥಿಕೆ ವಹಿಸಲು ಬಂದಾಗ, ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಘರ್ಷಣೆಯ ಸಮಯದಲ್ಲಿ, ರಾಜಿಂದರ್ ಕೆಳಗೆ ಬಿದಿದ್ದಾರೆ. ಬಿದ್ದವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಬೀದಿಗಿಳಿದು ಚಂಬಾ ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪೊಲೀಸರು ಅನೂಪ್ ಮತ್ತು ಅಮಿತ್ ಎಂಬ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಬಂಧಿಸಿ ಅವರ ವಿರುದ್ಧ ಕೊಲೆ ಆರೋಪವನ್ನು ದಾಖಲಿಸಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅವರು ಮದ್ಯ ಸೇವಿಸಿರಬಹುದು ಎಂದು ಊಹಿಸಲಾಗಿದೆ. ಆರೋಪಿಗಳನ್ನು ಪೊಲೀಸ್‌ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ : Manipur Violence: ಮಣಿಪುರ ಅಪಹರಣ-ಹತ್ಯೆ ಪ್ರಕರಣ; ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಯಲಾಯ್ತು ಕುಕಿ ಉಗ್ರರ ಅಟ್ಟಹಾಸ