Thursday, 12th December 2024

ತಾವೇ ಇಟ್ಟ ಐಇಡಿ ಬಾಂಬ್ ಸ್ಫೋಟಗೊಂಡು ಓರ್ವ ನಕ್ಸಲ್‌ ಸಾವು

ಬಿಜಾಪುರ್: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ನಕ್ಸಲರ ಸದಸ್ಯನೋರ್ವ ತಾವೇ ಇಟ್ಟ ಬಾಂಬ್ ಸ್ಫೋಟಗೊಂಡ ಪರಿಣಾಮ ಮೃತಪಟ್ಟಿದ್ದಾನೆ. ಛತ್ತೀಸ್ ಘಡದ ಬಿಜಾಪುರದ ಗಾಯತಪಾರದಲ್ಲಿ ಘಟನೆ ಸಂಭವಿಸಿದೆ. ಐಇಡಿ ಬಾಂಬ್ ಅಳವಡಿಸುವಾಗ ಬಾಂಬ್ ಸ್ಫೋಟ ಗೊಂಡಿದೆ.

ಬಸ್ತಾರ್ ಐಜಿಪಿ ಅವರು, ‘ರಸ್ತೆ ಭದ್ರತಾ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಹಾನಿ ಮಾಡುವ ಉದ್ದೇಶದಿಂದ ಪಶ್ಚಿಮ ಬಸ್ತರ್ ವಿಭಾಗದ ಸಿಪಿಐ ಮಾವೋವಾದಿ ಕಾರ್ಯಕರ್ತರು ಗಾಯತಪಾರ ಬಳಿ ಬೆಚಪಾಲ್-ಹುರೆಪಾಲ್ ರಸ್ತೆ ಉದ್ದಕ್ಕೂ ಐಇಡಿ ನೆಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಐಇಡಿ ಸಕ್ರಿಯಗೊಂಡು ಸ್ಫೋಟ ಸಂಭವಿಸಿತು. ಓರ್ವ ನಕ್ಸಲೀಯ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

ಮೃತ ನಕ್ಸಲ್ ನನ್ನು ಮಿಲಿಟಿಯಾ ಕಮಾಂಡರ್ ಸುನಿಲ್ ಪದಂ ಎಂದು ಗುರುತಿಸಲಾಗಿದೆ. ಸ್ಫೋಟ ಸಂಭವಿಸಿದ ಬೆನ್ನಲ್ಲೇ ಇತರೆ ನಕ್ಸಲರು ಮೃತದೇಹವನ್ನು ಬಿಟ್ಟು ಪರಾರಿಯಾಗಿದ್ದಾರೆ.