Monday, 14th October 2024

ಬಿಜೆಪಿ ಎಂಸಿಡಿ ಚುನಾವಣೆ ಗೆದ್ದರೆ ಆಪ್‌ ರಾಜಕೀಯ ತೊರೆಯಲಿದೆ: ಕೇಜ್ರಿವಾಲ್

ನವದೆಹಲಿ : ಬಿಜೆಪಿ ಎಂಸಿಡಿ ಚುನಾವಣೆಗಳನ್ನ ನಡೆಸಿ, ಗೆದ್ದರೆ ನಾವು (ಎಎಪಿ) ರಾಜಕೀಯವನ್ನ ತೊರೆಯುತ್ತೇವೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಮುನ್ಸಿಪಲ್ ಚುನಾವಣೆಗಳನ್ನ ಮುಂದೂಡಿದ ಕುರಿತು ಅಸಮಾಧಾನ ವ್ಯಕ್ತ ಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿಯ ಉತ್ತರ, ಪೂರ್ವ ಮತ್ತು ದಕ್ಷಿಣ ಎಂಬ ಮೂರು ನಾಗರಿಕ ಸಂಸ್ಥೆ ಗಳನ್ನ ಒಗ್ಗೂಡಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ನಂತರ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನ ಬಿಜೆಪಿ ಮುಂದೂಡಿರುವುದು ಬ್ರಿಟಿಷರನ್ನ ದೇಶದಿಂದ ಹೊರಹಾಕುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವವನ್ನ ಸ್ಥಾಪಿಸಲು ತ್ಯಾಗ ಮಾಡಿದ ಹುತಾತ್ಮರಿಗೆ ಮಾಡಿದ ಅವಮಾನವಾಗಿದೆ.

ನಾಳೆ ಅವರು ರಾಜ್ಯಗಳು ಮತ್ತು ದೇಶದ ಚುನಾವಣೆಗಳನ್ನು ಮುಂದೂಡುತ್ತಾರೆ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.