Monday, 25th November 2024

ಲಕ್ನೋದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆದಿದ್ದರೆ ಟೀಂ ಇಂಡಿಯಾ ಗೆಲ್ಲುತ್ತಿತ್ತು: ಅಖಿಲೇಶ್ ಯಾದವ್

ಇಟವಾ: ಏಕದಿನ ವಿಶ್ವಕಪ್ (2023ರ ) ಫೈನಲ್ ಪಂದ್ಯ ಗುಜರಾತ್ ಬದಲಿಗೆ ಲಕ್ನೋದಲ್ಲಿ ನಡೆದಿದ್ದರೆ ಆಸ್ಟ್ರೇಲಿಯ ವಿರುದ್ಧ ಟೀಂ ಇಂಡಿಯಾ ಗೆಲ್ಲು ತ್ತಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಭಾನುವಾರ ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೋಲನ್ನಪ್ಪಿತು. ಅಹಮದಾಬಾದ್ ಬದಲಿಗೆ ಲಕ್ನೋದಲ್ಲಿ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ನಡೆದಿದ್ದರೆ ಟೀಂ ಇಂಡಿಯಾ ಗೆಲುತ್ತಿತ್ತು.

ಲಕ್ನೋದಲ್ಲಿ ಪಂದ್ಯ ನಡೆದಿದ್ದರೆ ಟೀಂ ಇಂಡಿಯಾಕ್ಕೆ ಭಗವಾನ್ ವಿಷ್ಣು ಮತ್ತು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶೀರ್ವಾದ ಸಿಗುತ್ತಿತ್ತು ಎಂದು ಹೇಳಿದರು. ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ನಲ್ಲಿ ಕೆಲವು ಸಮಸ್ಯೆಗಳಿದ್ದು, ಇದರಿಂದಾಗಿ ಆಟಗಾರರ ಸಿದ್ಧತೆ ಅಪೂರ್ಣವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಪರೋಕ್ಷವಾಗಿ ಬಿಜೆಪಿ ರಾಜಕೀಯ ಕಾರಣಕ್ಕೆ ಫೈನಲ್ ಪಂದ್ಯವನ್ನು ಅಹಮದಬಾದ್ ನಲ್ಲಿ ನಡೆಯುವಂತೆ ನೋಡಿಕೊಂಡಿದೆ ಎಂದು ಆರೋಪಿಸಿ ದ್ದಾರೆ. ಲಕ್ನೋ ಸ್ಟೇಡಿಯಂಗೆ ಎಕ್ನಾ ಸ್ಟೇಡಿಯಂ ಎಂದು ಸಮಾಜವಾದಿ ಸರ್ಕಾರ ಅಧಿಕಾರದಲ್ಲಿದ್ದಾಗ ನಾಮಕರಣ ಮಾಡಿತ್ತು. ವಿಷ್ಣುವಿನ ಒಂದು ಹೆಸರು ಎಕ್ನಾ ಆಗಿದೆ. 2018ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಎಕ್ನಾ ಕ್ರಿಕೆಟ್ ಸ್ಟೇಡಿಯಂ ಎಂದು ಹೆಸರನ್ನು ಬದಲಾಯಿಸಿತ್ತು.